ಆಹಾರಧಾನ್ಯ ಬಿತ್ತನೆ ಅಲ್ಪ ಹೆಚ್ಚಳ

7
ಗರಿಗೆದರಿದ ಕೃಷಿ ಚಟುವಟಿಕೆ

ಆಹಾರಧಾನ್ಯ ಬಿತ್ತನೆ ಅಲ್ಪ ಹೆಚ್ಚಳ

Published:
Updated:
ಆಹಾರಧಾನ್ಯ ಬಿತ್ತನೆ ಅಲ್ಪ ಹೆಚ್ಚಳ

ನವದೆಹಲಿ: ಮುಂಗಾರು ಹಂಗಾಮು ಬಿತ್ತನೆ ಕಾರ್ಯ ಆರಂಭವಾಗಿದ್ದು, ಜುಲೈನಲ್ಲಿ ಚುರುಕು ಪಡೆದುಕೊಳ್ಳಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಈವರೆಗೆ 81 ಲಕ್ಷ ಹೆಕ್ಟೇರ್‌ಗಳಲ್ಲಿ ಆಹಾರ ಧಾನ್ಯಗಳ ಬಿತ್ತನೆಯಾಗಿದೆ. ಕಳೆದ ವರ್ಷ 72 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಕಾರ್ಯ ನಡೆದಿತ್ತು ಎಂದು ಮಾಹಿತಿ ನೀಡಿದೆ.

ಉತ್ತಮ ಮುಂಗಾರಿನಿಂದ ಭತ್ತ, ಗೋಧಿ ಮತ್ತು ಬೇಳೆಕಾಳು ಇಳುವರಿ ಹೆಚ್ಚಾಗಿದ್ದು, 2016–17ರಲ್ಲಿ 27 ಕೋಟಿ ಟನ್‌ಗಳಷ್ಟು ದಾಖಲೆ ಪ್ರಮಾಣದ ಆಹಾರ ಧಾನ್ಯ ಉತ್ಪಾದನೆಯಾಗಿದೆ.

‘2017–18ರಲ್ಲಿಯೂ ವಾಡಿಕೆ ಯಂತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದನೆಯಾಗುವ ನಿರೀಕ್ಷೆ ಇದೆ’ ಎಂದು ಸಚಿವಾಲಯ ಹೇಳಿದೆ.

ಸಾಲ ಮನ್ನಾಕ್ಕೆ ಆಗ್ರಹಿಸಿ ಮಧ್ಯ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಉತ್ಪಾದನೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry