ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಗದುಗಿನಲ್ಲಿ ನೆಟ್ಟಕಲ್ಲಪ್ಪ ಸ್ಮಾರಕ ಓಟ

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಗದಗ: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ಆಶ್ರಯದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ 2017ರ ರಾಜ್ಯ ಮಟ್ಟದ ರಸ್ತೆ ಓಟದ ಸ್ಪರ್ಧೆ ಗದುಗಿನಲ್ಲಿ ಭಾನುವಾರ ಬೆಳಿಗ್ಗೆ ನಡೆಯಲಿದೆ.

ಪುರುಷರ ವಿಭಾಗದಲ್ಲಿ 12ಕಿ.ಮೀ, ಮಹಿಳಾ ವಿಭಾಗದಲ್ಲಿ 6 ಕಿ.ಮೀ ಮತ್ತು ಹದಿನಾರು ವರ್ಷದೊಳಗಿನ ಬಾಲಕ ಬಾಲಕಿಯರ ವಿಭಾಗದಲ್ಲಿ 2.5ಕಿ.ಮೀ ಅಂತರದ ಓಟದ ಸ್ಪರ್ಧೆಗಳು ನಡೆಯಲಿದ್ದು, 200ಕ್ಕೂ ಹೆಚ್ಚು ಸ್ಪರ್ಧಾಳುಗಳು ಶನಿವಾರ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಪರ್ಧಿಗಳಿಗೆ  ಚೆಸ್ಟ್‌ ನಂಬರ್‌ಗಳನ್ನು ನೀಡಲಾಯಿತು.

ಪುರುಷ ಮತ್ತು ಮಹಿಳಾ ವಿಭಾಗ ಗಳಲ್ಲಿ ಮೊದಲ ಆರು ಸ್ಥಾನಗಳನ್ನು ಗೆದ್ದವರಿಗೆ ಕ್ರಮವಾಗಿ ₹ 5,000, ₹3,500, ₹2,500, ₹1,500, ₹650 ಮತ್ತು ₹ 500 ನಗದು ಬಹುಮಾನ ನೀಡಲಾಗುವುದು. ಕ್ರಮವಾಗಿ ಏಳ ರಿಂದ ಹತ್ತರವರೆಗಿನ ಸ್ಥಾನದಲ್ಲಿ ಗುರಿ ತಲುಪಿದವರು ತಲಾ ₹350 ಪಡೆಯಲಿದ್ದಾರೆ.

ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರಿಗೆ ಕ್ರಮವಾಗಿ ₹1,500, ₹1,000 ಮತ್ತು ₹750  ನಗದು ಬಹುಮಾನ ಇದೆ. ನಂತರದ ಏಳು ಸ್ಥಾನಗಳನ್ನು ಪಡೆದವರಿಗೆ ಅರ್ಹತಾ ಪತ್ರಗಳನ್ನು ನೀಡ ಲಾಗುವುದು.

ಓಟದ ಮಾರ್ಗ: ಗದುಗಿನ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಇರುವ ಪಂಚಾಚಾರ್ಯ ಮಾಂಗಲ್ಯ ಮಂದಿರದ ಎದುರು, ಪುಟ್ಟ ರಾಜ ಗವಾಯಿ ವೃತ್ತದಿಂದ ಎಡಕ್ಕೆ, ಎಪಿ ಎಂಸಿ ರಸ್ತೆ, ಎಪಿಎಂಸಿ ಕೊನೆಯ ಗೇಟ್‌ ತಲುಪಿದ ನಂತರ ಎಡಕ್ಕೆ, ಸಂಬಾಪುರ ರಸ್ತೆ, ಕೆಇಬಿ ಗ್ರಿಡ್‌ ಎದುರು, ಬಾಲ ವಿನಾ ಯಕ ವಿದ್ಯಾನಿಕೇತನದ ಎದುರು, ಸಂಬಾಪುರ ಪೂಲ್‌, ಅಲ್ಲಿಂದ ಅದೇ ಹಾದಿಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ವಾಪಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT