ಆಫ್ಘಾನಿಸ್ತಾನಕ್ಕೆ ಸ್ಮರಣೀಯ ಜಯ

7
ರಶೀದ್‌ ಮೋಡಿ; ವಿಂಡೀಸ್‌ಗೆ ಆಘಾತ

ಆಫ್ಘಾನಿಸ್ತಾನಕ್ಕೆ ಸ್ಮರಣೀಯ ಜಯ

Published:
Updated:
ಆಫ್ಘಾನಿಸ್ತಾನಕ್ಕೆ ಸ್ಮರಣೀಯ ಜಯ

ಗ್ರಾಸ್‌ ಐಲೆಟ್‌: ಆಫ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವರು ಶುಕ್ರವಾರ ಗ್ರಾಸ್‌ ಐಲೆಟ್‌ ಕ್ರೀಡಾಂಗಣ ದಲ್ಲಿ ಬೀಸಿದ ಸ್ಪಿನ್‌ ಬಲೆಯಲ್ಲಿ ವೆಸ್ಟ್ ಇಂಡೀಸ್‌ ತಂಡದ ಬ್ಯಾಟ್ಸ್‌ಮನ್‌ಗಳು ಬಂಧಿಯಾದರು.

18 ವರ್ಷದ ರಶೀದ್‌ (18ಕ್ಕೆ7) ಅವರ ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್‌ ಸಾಧನೆಯ ಬಲದಿಂದ ಆಫ್ಘಾನಿಸ್ತಾನ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 63ರನ್‌ ಗಳ ಸ್ಮರಣೀಯ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಪಡೆದುಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಆಫ್ಘಾನಿಸ್ತಾನ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 212ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಕೆರಿಬಿಯನ್‌ ನಾಡಿನ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ರಶೀದ್‌ ದಾಳಿಗೆ ತತ್ತರಿಸಿದ ಆತಿಥೇಯರು 44.4 ಓವರ್‌ಗಳಲ್ಲಿ 149 ರನ್‌ ಗಳಿಸಿದರು.

ಬ್ಯಾಟಿಂಗ್‌ ಆರಂಭಿಸಿದ ಆಫ್ಘನ್‌ ತಂಡ ಆರಂಭಿಕ ಆಘಾತ ಅನುಭವಿಸಿತು. ನೂರ್‌ ಅಲಿ ಜದ್ರಾನ್‌ (5), ರಹಮತ್ ಶಾ (17) ಮತ್ತು ನಾಯಕ ಅಸ್ಗರ್‌ ಸ್ಟಾನಿಕ್‌ಜಾಯ್‌ (2) ಬೇಗನೆ ವಿಕೆಟ್‌ ಒಪ್ಪಿಸಿದರು. ಆದರೆ ಜಾವೆದ್‌ ಅಹಮದಿ (81; 102ಎ, 8ಬೌಂ, 2ಸಿ) ಮತ್ತು ಗುಲ್‌ಬದಿನ್‌ ನೈಬ್‌ (ಔಟಾಗದೆ 41; 28ಎ, 3ಬೌಂ, 2ಸಿ) ದಿಟ್ಟ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.

ಗುರಿ ಬೆನ್ನಟ್ಟಿದ ವಿಂಡೀಸ್‌ ತಂಡ ಕೀರನ್‌ ಪೊವೆಲ್‌ (2) ವಿಕೆಟ್‌  ಬೇಗನೆ ಕಳೆದುಕೊಂಡಿತು. ಎವಿನ್‌ ಲೆವಿಸ್‌ (21) ಮತ್ತು ಶಾಯ್‌ ಹೋಪ್‌ (35) ಆತಿಥೇಯರಿಗೆ ಆಸರೆಯಾದರು. ಆದರೆ ಇತರ ಪ್ರಮುಖ ಬ್ಯಾಟ್ಸ್‌ಮನ್‌ಗಳು ರಶೀದ್‌ ಮತ್ತು ದೌಲತ್‌ ಜದ್ರಾನ್‌ ದಾಳಿಯನ್ನು ಎದುರಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ಆಫ್ಘಾನಿಸ್ತಾನ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 212 (ಜಾವೇದ್‌ ಅಹಮದಿ 81, ರಹಮತ್‌ ಶಾ 17, ಸಮಿವುಲ್ಲಾ ಶೆನ್ವಾರಿ 22, ಮೊಹಮ್ಮದ್‌ ನಬಿ ಔಟಾಗದೆ 27, ಅಫ್ಸರ್‌ ಜಜಾಯ್‌ 13, ಗುಲ್‌ಬದಿನ್‌ ನೈಬ್‌ ಔಟಾಗದೆ 41; ಆ್ಯಷ್ಲೆ ನರ್ಸೆ 34ಕ್ಕೆ2, ಅಲ್ಜರಿ ಜೋಸೆಫ್‌ 52ಕ್ಕೆ1, ಮಿಗುಯೆಲ್‌ ಕಮಿನ್ಸ್‌ 32ಕ್ಕೆ1, ಶಾನನ್‌ ಗೇಬ್ರಿಯಲ್‌ 21ಕ್ಕೆ1).

ವೆಸ್ಟ್‌ ಇಂಡೀಸ್‌: 44.4 ಓವರ್‌ಗಳಲ್ಲಿ 149 (ಎವಿನ್‌ ಲೆವಿಸ್‌ 21, ಶಾಯ್‌ ಹೋಪ್‌ 35, ಜೊನಾಥನ್‌ ಕಾರ್ಟರ್‌ 19, ಆ್ಯಷ್ಲೆ ನರ್ಸೆ 12, ಅಲ್ಜರಿ ಜೋಸೆಫ್‌ 27; ದೌಲತ್‌ ಜದ್ರಾನ್‌ 25ಕ್ಕೆ2, ಗುಲ್‌ಬದಿನ್‌ ನೈಬ್‌ 31ಕ್ಕೆ1, ರಶೀದ್‌ ಖಾನ್‌ 18ಕ್ಕೆ7).

ಫಲಿತಾಂಶ: ಆಫ್ಘಾನಿಸ್ತಾನಕ್ಕೆ 63 ರನ್‌ ಗೆಲುವು ಹಾಗೂ ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ರಶೀದ್‌ ಖಾನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry