ಓಸ್ತಪೆಂಕೊಗೆ ಚೊಚ್ಚಲ ಕಿರೀಟ

7

ಓಸ್ತಪೆಂಕೊಗೆ ಚೊಚ್ಚಲ ಕಿರೀಟ

Published:
Updated:
ಓಸ್ತಪೆಂಕೊಗೆ ಚೊಚ್ಚಲ ಕಿರೀಟ

ಪ್ಯಾರಿಸ್: ಲಾಟ್ವಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಜೆಲೆನಾ ಓಸ್ತಪೆಂಕೊ ಶನಿವಾರ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯಲ್ಲಿ 20 ವರ್ಷದ ಆಟಗಾರ್ತಿ ಜೆಲೆನಾ 4–6, 6–4, 6–3ರಲ್ಲಿ ಅನುಭವಿ ಸಿಮೊನಾ ಹಲೆಪ್‌ಗೆ ಆಘಾತ ನೀಡಿದರು.

ಜೆಲೆನಾ ಇಲ್ಲಿ ಪ್ರಶಸ್ತಿ ಗೆದ್ದುಕೊಳ್ಳು ವುದರೊಂದಿಗೆ ಹಲವು ಪ್ರಥಮಗಳಿಗೆ ಕಾರಣರಾಗಿದ್ದಾರೆ. ಗ್ರ್ಯಾಂಡ್‌ಸ್ಲಾಮ್ ಗೆದ್ದ ಮೊದಲ ಲಾಟ್ವಿಯಾದ ಆಟಗಾರ್ತಿ ಎಂಬ ಕಿರೀಟ ಇವರ ಮುಡಿಗೆ ಏರಿದೆ.

ಶ್ರೇಯಾಂಕ ರಹಿತ ಆಟಗಾರ್ತಿ ಗ್ರ್ಯಾಂಡ್‌ಸ್ಲಾಮ್ ಗೆದ್ದಿರುವುದು ಕೂಡ ಇದೇ ಮೊದಲು. ಕಡಿಮೆ ರ್‍ಯಾಂಕಿಂಗ್ (47) ಹೊಂದಿರುವ ಆಟಗಾರ್ತಿ ಯೊಬ್ಬರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವುದು ಕೂಡ ಇದೇ ಮೊದಲು.

ಫ್ರೆಂಚ್‌ ಓಪನ್‌ ಗೆದ್ದ ಕಿರಿಯ ಆಟಗಾರ್ತಿ ಎಂಬ ಶ್ರೇಯ ಕೂಡ ಇವರದಾಗಿದೆ. 1997ರಲ್ಲಿ ಕೂಡ 20 ವರ್ಷದ ಆಟಗಾರ್ತಿ ಇವಾ ಮಜೋಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.

25 ವರ್ಷದ ರುಮೇನಿಯಾದ ಆಟಗಾರ್ತಿ ಹಲೆಪ್‌ ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಹಲೆಪ್ ಜಯದಾಖಲಿಸಿದ್ದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಏರುತ್ತಿದ್ದರು.

ಮೊದಲ ಸೆಟ್‌ ಗೆದ್ದು ವಿಶ್ವಾಸ ಮೂಡಿಸಿದ್ದ ಹಲೆಪ್ ಬಳಿಕ ಎರಡು ಸೆಟ್‌ಗಳನ್ನು ಎದುರಾಳಿಗೆ ಬಿಟ್ಟು ಕೊಟ್ಟರು.  ತಾಳ್ಮೆಯ ಆಟ ಆಡಿದ ಓಸ್ತ ಪೆಂಕೊ ತಮ್ಮ ಅಪೂರ್ವ ಬ್ಯಾಕ್‌ ಹ್ಯಾಂಡ್ ಹೊಡೆತಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry