ಶಿಕ್ಷಕಿ ಹೆಸರು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

7

ಶಿಕ್ಷಕಿ ಹೆಸರು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

Published:
Updated:
ಶಿಕ್ಷಕಿ ಹೆಸರು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

ನಾಗಮಂಗಲ: ‘ನನ್ನ ಸಾವಿಗೆ ಶಿಕ್ಷಕಿಯೇ ಕಾರಣ’ ಎಂದು ಅಂಗೈ ಮೇಲೆ ಬರೆದುಕೊಂಡು ಪಟ್ಟಣದ ಟಿ.ಬಿ. ಬಡಾವಣೆಯಲ್ಲಿ ಶನಿವಾರ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ.

ಸುಭಾಷ್ ನಗರದ ನಾಗಮ್ಮ ಮತ್ತು ಶ್ರೀನಿವಾಸ ದಂಪತಿ ಪುತ್ರಿ ಭವಾನಿ (13) ಮೃತಪಟ್ಟವಳು.

ಸಾರೇಮೇಗಲಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಉತ್ತೀರ್ಣಗೊಂಡಿದ್ದು, ಕಳೆದ ಕೆಲ ದಿನಗಳಿಂದ ಕೆಎನ್ಎಸ್ ಶಾಲೆಯಲ್ಲಿ 8ನೇ ತರಗತಿಗೆ ಹೋಗುತ್ತಿದ್ದಳು.

ಭವಾನಿ

‘ತನ್ನ ವರ್ಗಾವಣೆ ಪತ್ರ (ಟಿ.ಸಿ) ತರಲು ಪ್ರಾಥಮಿಕ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಅಲ್ಲಿನ ಶಿಕ್ಷಕಿ ಯಶೋದಮ್ಮ ಬೈದರು. ಇದರಿಂದ ಬೇಸತ್ತ ಆಕೆ, ಮಧ್ಯಾಹ್ನವೇ ಗುಡಿಸಲಿನ ತೊಲೆಗೆ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕಿ ತಲೆಮರೆಸಿಕೊಂಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry