ಫೇಸ್‌ಬುಕ್‌ನಲ್ಲಿ ರಾಜ ಮನೆತನದ ಅವಹೇಳನ: ವ್ಯಕ್ತಿಗೆ 35 ವರ್ಷ ಜೈಲು

7

ಫೇಸ್‌ಬುಕ್‌ನಲ್ಲಿ ರಾಜ ಮನೆತನದ ಅವಹೇಳನ: ವ್ಯಕ್ತಿಗೆ 35 ವರ್ಷ ಜೈಲು

Published:
Updated:
ಫೇಸ್‌ಬುಕ್‌ನಲ್ಲಿ ರಾಜ ಮನೆತನದ ಅವಹೇಳನ: ವ್ಯಕ್ತಿಗೆ 35 ವರ್ಷ ಜೈಲು

ಬ್ಯಾಂಕಾಕ್‌: ಥಾಯ್ಲೆಂಡ್‌ನ ರಾಜಕುಟುಂಬದ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಮಾನಕರವಾಗಿ ಬರೆದ ಸ್ಟೇಟಸ್‌ ಹಾಕಿದ 34 ವರ್ಷದ  ವ್ಯಕ್ತಿಯೊಬ್ಬನಿಗೆ ಬ್ಯಾಂಕಾಕ್‌ ಸೇನಾ ನ್ಯಾಯಾಲಯ 35 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಥಾಯ್ಲೆಂಡ್‌ ರಾಜಪ್ರಭುತ್ವವನ್ನು ಟೀಕಿಸಿದ ಅಪರಾಧಕ್ಕಾಗಿ ನೀಡಿದ ಕಠಿಣ ಶಿಕ್ಷೆ ಇದಾಗಿದೆ ಎನ್ನಲಾಗಿದೆ. ಅಪರಾಧಿ ತಪ್ಪೊಪ್ಪಿಕೊಂಡ ಕಾರಣಕ್ಕೆ ಶಿಕ್ಷೆಯನ್ನು ಅರ್ಧಕ್ಕೆ ಇಳಿಸಲಾಗಿದೆ.

ವಿಚೈ ಎಂಬುದು ಅಪರಾಧಿಯ ಹೆಸರು. ಆದರೆ, ಸಂಬಂಧಿಕರಿಂದ  ಬಹಿಷ್ಕಾರಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ ಆತನ ಪೂರ್ಣ ಹೆಸರನ್ನು ಬಹಿರಂಗಪಡಿಸಿಲ್ಲ. ತನ್ನ ಗೆಳೆಯನನ್ನು ಅಪಹರಿಸಲು ಈ ಖಾತೆಯನ್ನು ಬಳಸಿಕೊಂಡಿದ್ದ ಎಂದು ರಾಜ ಮನೆತನದ  ಪ್ರಕರಣಗಳನ್ನು ನಿರ್ವಹಿಸುವ ಕಾನೂನು ತಂಡ ಹೇಳಿದೆ.

ವಿಚೈಯನ್ನು 2015ರ ಡಿಸೆಂಬರ್‌ನಲ್ಲಿ ದಕ್ಷಿಣ ಚಿಯಾಂಗ್‌ನಲ್ಲಿ  ಬಂಧಿಸಲಾಗಿತ್ತು.  ಆರಂಭದಲ್ಲಿ ಆರೋಪವನ್ನು ಅಲ್ಲಗಳೆದರೂ, ಒಂದು ವರ್ಷದ ಜೈಲುವಾಸದ ನಂತರ ನ್ಯಾಯಾಲಯದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry