ಒತ್ತಡ ಮುಕ್ತಿಗಾಗಿ ಹೋಟೆಲ್‌ನಲ್ಲಿ ಬೆಕ್ಕು

7

ಒತ್ತಡ ಮುಕ್ತಿಗಾಗಿ ಹೋಟೆಲ್‌ನಲ್ಲಿ ಬೆಕ್ಕು

Published:
Updated:
ಒತ್ತಡ ಮುಕ್ತಿಗಾಗಿ ಹೋಟೆಲ್‌ನಲ್ಲಿ ಬೆಕ್ಕು

ದುಬೈ: ದುಬೈನ ಐಷಾರಾಮಿ ಹೋಟೆಲ್‌ ‘ಜನ್ಹಾ ಹೋಟೆಲ್‌ ಅಂಡ್‌ ರೆಸಾರ್ಟ್‌’ ತುಂಬೆಲ್ಲಾ ಈಗ ಬೆಕ್ಕುಗಳದ್ದೇ ಕಾರುಬಾರು. ದಿನಪೂರ್ತಿ ಓಡಾಡಿಕೊಂಡಿರುವ ಬಣ್ಣಬಣ್ಣದ ಬೆಕ್ಕುಗಳು ಹೋಟೆಲ್‌ ಅಂದವನ್ನೂ ಹೆಚ್ಚಿಸಿವೆ...

ಅಷ್ಟಕ್ಕೂ ಹೋಟೆಲ್‌ ಮಾಲೀಕ ನೆಮ್ಹೆ ಇಮಾದ್‌ ಅವರು ಈ ಪರಿಯ ಬೆಕ್ಕನ್ನು ಸಾಕಿರುವ ಉದ್ದೇಶವೆಂದರೆ ದಿನಪೂರ್ತಿ ದುಡಿಯುವ ನೌಕರರು ಒತ್ತಡಮುಕ್ತರಾಗಿ ಚಟುವಟಿಕೆಯಿಂದ ಇರುವ ಸಲುವಾಗಿ...!

ಹೌದು. ಬೆಕ್ಕಿನ ಸದಾ ಒಡನಾಟವಿದ್ದರೆ ಕೆಲಸದಲ್ಲಿ ಉತ್ಸಾಹ ಮೂಡುತ್ತದೆ, ಒತ್ತಡ ದೂರವಾಗುತ್ತದೆ ಎಂಬ ಅಧ್ಯಯನದ ವರದಿಯಿಂದ ಪ್ರೇರೇಪಿತರಾಗಿರುವ ನೆಮ್ಹೆ ಇಮಾದ್‌ ಬೆಕ್ಕುಗಳನ್ನು ಸಾಕಿದ್ದಾರೆ.

‘ಬೆಕ್ಕುಗಳನ್ನು ಸಾಕಿದ ಮೇಲೆ ನಮ್ಮ ನೌಕರರ ಉತ್ಸಾಹ ಹೆಚ್ಚಾಗಿದೆ. ಅವರಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿದೆ. ಇದರಿಂದ ನಮ್ಮ ಲಾಭದ ಪ್ರಮಾಣವೂ ಹೆಚ್ಚಿದೆ’ ಎಂದು ಇಮಾದ್‌ ಅವರು ಹೇಳಿರುವುದಾಗಿ ‘ಗಲ್ಫ್‌ನ್ಯೂಸ್‌’  ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry