ಸಾಗರದ ತಳದಲ್ಲಿ ‘ನಾಸಾ ಮಿಷನ್‌’

7

ಸಾಗರದ ತಳದಲ್ಲಿ ‘ನಾಸಾ ಮಿಷನ್‌’

Published:
Updated:
ಸಾಗರದ ತಳದಲ್ಲಿ ‘ನಾಸಾ ಮಿಷನ್‌’

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು 4 ಮಂದಿಯ ತಂಡವೊಂದನ್ನು ಅಟ್ಲಾಂಟಿಕ್‌ ಮಹಾಸಾಗರಕ್ಕೆ ಕಳುಹಿಸಲು  ನಿರ್ಧರಿಸಿದೆ. ಈ ತಂಡವು 10 ದಿನಗಳ ಕಾಲ ಅಲ್ಲಿಯೇ ಇರಲಿದ್ದು, ಮಂಗಳಗ್ರಹದಲ್ಲಿರುವ ವಾತಾವರಣದಲ್ಲಿರುವ  ಸಮಾನ ಅಂಶಗಳನ್ನು ಸಾಗರದ ತಳದಲ್ಲಿ ಪರಿಶೋಧನೆಗೆ ಒಳಪಡಿಸಲಿದೆ.

ಸಮುದ್ರದ ಕೆಳಭಾಗದಲ್ಲಿ ಕೆಲಸ ಮಾಡುವುದರಿಂದ ಮಾನವರು ಬಾಹ್ಯಾಕಾಶದಲ್ಲಿ ಅನುಭವಿಸುವ ಸೂಕ್ಷ್ಮ-ಗುರುತ್ವಾಕರ್ಷಣೆಯ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ ಎಂದು ಫ್ಲಾರಿಡಾದ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಸಾಗರ ತಳದಲ್ಲಿರುವ ಸಂಶೋಧನಾ ಕೇಂದ್ರದಲ್ಲಿನ ವಾತಾವರಣವು, ಬಾಹ್ಯಾಕಾಶದಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುತ್ತದೆ. ಹೀಗಾಗಿ ಈ ಕೇಂದ್ರದಲ್ಲಿ ತನ್ನ ಕೆಲವು ಉಪಕರಣಗಳು, ಸಂಶೋಧನೆಗಳನ್ನು ಪ್ರಯೋಗಕ್ಕೆ ಗುರಿಪಡಿಸಲು ನಾಸಾ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry