ಹಗರಣ ಆರೋಪ: ದಾಖಲೆ ಬಹಿರಂಗಪಡಿಸಲು ಸಿ.ಎಂ ಸವಾಲು

7

ಹಗರಣ ಆರೋಪ: ದಾಖಲೆ ಬಹಿರಂಗಪಡಿಸಲು ಸಿ.ಎಂ ಸವಾಲು

Published:
Updated:
ಹಗರಣ ಆರೋಪ: ದಾಖಲೆ ಬಹಿರಂಗಪಡಿಸಲು ಸಿ.ಎಂ ಸವಾಲು

ಹುಬ್ಬಳ್ಳಿ: ‘ಇಂಧನ ಇಲಾಖೆಯಲ್ಲಿ ಬಹುಕೋಟಿ ರೂಪಾಯಿ ಹಗರಣ ನಡೆದಿದೆ’ ಎಂದು ಆರೋಪಿಸಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಲಿ. ಆಮೇಲೆ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ  ಮಾತನಾಡಿದ ಅವರು, ‘ಕುಮಾರಸ್ವಾಮಿ ತಾವು ಮಾಡಿದ್ದ ಆರೋಪಕ್ಕೆ ಪೂರಕವಾಗಿ ದಾಖಲೆಗಳನ್ನು ನೀಡುವುದಿಲ್ಲ. ಆದರೂ, ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಅವರು ಹಿಟ್‌ ಅಂಡ್‌ ರನ್‌ ಮನುಷ್ಯ’ ಎಂದರು.

ಪರಿಹಾರವಲ್ಲ: ರೈತರ ಖಾತೆಗೆ ₹ 1 ಜಮಾ ಆಗಿದ್ದು ಪರಿಹಾರದ ಮೊತ್ತವಲ್ಲ. ಈ ವಿಷಯದಲ್ಲಿ ಪ್ರತಿಪಕ್ಷಗಳು ಸುಳ್ಳು ಹೇಳಿವೆ. ರೈತರ ಬ್ಯಾಂಕ್‌ ಖಾತೆಗಳನ್ನು ಆಧಾರ್‌ಗೆ ಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ, ಆಧಾರ್‌ ಜೋಡಣೆ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಖಾತೆಗಳಿಗೆ ₹1 ಹಾಕುತ್ತಿದ್ದಾರೆ. ಇದಕ್ಕಾಗಿ ರೈತರು ಗಾಬರಿಪಡುವ ಅಗತ್ಯವಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry