ಬದರಿನಾಥದಲ್ಲಿ ಹೆಲಿಕಾಪ್ಟರ್‌ ಅಪಘಾತ: ಎಂಜಿನಿಯರ್‌ ಸಾವು

7

ಬದರಿನಾಥದಲ್ಲಿ ಹೆಲಿಕಾಪ್ಟರ್‌ ಅಪಘಾತ: ಎಂಜಿನಿಯರ್‌ ಸಾವು

Published:
Updated:
ಬದರಿನಾಥದಲ್ಲಿ ಹೆಲಿಕಾಪ್ಟರ್‌ ಅಪಘಾತ: ಎಂಜಿನಿಯರ್‌ ಸಾವು

ಡೆಹ್ರಾಡೂನ್‌: ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಬದರಿನಾಥ್‌ನಲ್ಲಿ ಅಪಘಾತಕ್ಕೀಡಾದ ಪರಿಣಾಮ ಒಬ್ಬ  ಎಂಜಿನಿಯರ್‌ ಸಾವಿಗೀಡಾಗಿದ್ದು, ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಒಟ್ಟು 8 ಮಂದಿ ಇದ್ದರು. ಐವರು ಪ್ರಯಾಣಿಕರು ಮತ್ತು ಒಬ್ಬ ಎಂಜಿನಿಯರ್‌ ಹಾಗೂ ಇಬ್ಬರು ಪೈಲಟ್‌ಗಳಿದ್ದರು.

ಬದರಿನಾಥ್‌ನಿಂದ ಹರಿದ್ವಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಶನಿವಾರ ಬೆಳಿಗ್ಗೆ 7.45ಕ್ಕೆ ಈ ಅವಘಡ ಸಂಭವಿಸಿದ್ದು, ಎಲ್ಲ ಐವರು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. 

‘ಎಂಜಿನಿಯರ್‌ ವಿಕ್ರಮ್‌ ಲಾಂಬಾ ಅವರು ವಿಮಾನದ ರೋಟರ್‌ ಬ್ಲೇಡ್‌  ಬಡಿದು ಮೃತಪಟ್ಟಿದ್ದಾರೆ. ಇವರು ಮೂಲತಃ ಅಸ್ಸಾಂನವರು’ ಎಂದು ಚಮೋಲಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ತೃಪ್ತಿ ಭಟ್‌ ತಿಳಿಸಿದ್ದಾರೆ.

ಗಾಳಿಯ ಒತ್ತಡ ಕಡಿಮೆ ಇದ್ದ ಕಾರಣ ಟೇಕ್‌ ಆಫ್‌ ವೇಳೆ ವಿಮಾನ ಆಯ ತಪ್ಪಿ ಅಪಘಾತ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry