ಪ್ರತಿಭಟನೆಗೆ ಮಣಿದ ವಿವಿ ಜುಲೈ 11ರಂದೇ ಪರೀಕ್ಷೆ

7

ಪ್ರತಿಭಟನೆಗೆ ಮಣಿದ ವಿವಿ ಜುಲೈ 11ರಂದೇ ಪರೀಕ್ಷೆ

Published:
Updated:
ಪ್ರತಿಭಟನೆಗೆ ಮಣಿದ ವಿವಿ ಜುಲೈ 11ರಂದೇ ಪರೀಕ್ಷೆ

ಬೆಂಗಳೂರು: ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಬೆಂಗಳೂರು ವಿಶ್ವವಿದ್ಯಾಲಯವು ಜುಲೈ 11 ರಿಂದಲೇ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಕುರಿತು  ಮರು ಆದೇಶ ಹೊರಡಿಸಿದೆ.

ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯ ಪ್ರಕಾರ ದ್ವಿತೀಯ ಸೆಮಿಸ್ಟರ್ ಪರೀಕ್ಷೆಗಳು ಜುಲೈ 11ರಿಂದ ನಡೆಯಬೇಕಿದ್ದವು. ಆದರೆ, ಎರಡು ದಿನಗಳ ಹಿಂದೆ ಪರಿಷ್ಕೃತ ಆದೇಶ ಹೊರಡಿಸಿದ್ದ ವಿಶ್ವವಿದ್ಯಾಲಯ, ‘ಜೂನ್ 28ರಿಂದಲೇ ಪರೀಕ್ಷೆಗಳು ಆರಂಭವಾಗಲಿವೆ’ ಎಂದು ತಿಳಿಸಿತ್ತು.

ಪರೀಕ್ಷಾ ದಿನಾಂಕ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಹಾಗೂ ಶನಿವಾರ ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಮೊದಲ ವೇಳಾಪಟ್ಟಿಯ ಪ್ರಕಾರವೇ ಪರೀಕ್ಷೆ ನಡೆಸುವಂತೆ ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಎಂ.ಎಸ್.ರೆಡ್ಡಿ ಅವರು ‘ಹಿಂದಿನ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲಾಗುತ್ತದೆ’ ಎಂದು ಹೇಳಿಕೆ ನೀಡಿದರು. ಮರು ಆದೇಶದ ಲಿಖಿತ ಪ್ರತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry