ನಗರಗಳ ಬಡವರಲ್ಲಿ ಮಧುಮೇಹ ಹೆಚ್ಚು

7

ನಗರಗಳ ಬಡವರಲ್ಲಿ ಮಧುಮೇಹ ಹೆಚ್ಚು

Published:
Updated:
ನಗರಗಳ ಬಡವರಲ್ಲಿ ಮಧುಮೇಹ ಹೆಚ್ಚು

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಸಿರಿವಂತ ರಾಜ್ಯಗಳ ನಗರಗಳಲ್ಲಿ ಮಧುಮೇಹಕ್ಕೆ ತುತ್ತಾಗುತ್ತಿರುವ ಬಡವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

‘ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌, ದಿ ಇಂಡಿಯಾ ಡಯಬಿಟೀಸ್‌’ (ಐಸಿಎಂಆರ್‌–ಐಎನ್‌ಡಿಐಎಬಿ), ಈ ಅಧ್ಯಯನ ನಡೆಸುತ್ತಿದೆ.

ಸದ್ಯ, ಅಧ್ಯಯನದ ಭಾಗವಾಗಿ ಮೊದಲ ಹಂತದ ಸಮೀಕ್ಷೆ ಪೂರ್ಣಗೊಂಡಿದೆ. ಇದುವರೆಗೆ ಸಂಗ್ರಹಿಸಲಾಗಿರುವ ದತ್ತಾಂಶಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಲಾಗಿದೆ. ವರದಿಯು ‘ದ ಲ್ಯಾನ್ಸೆಟ್‌ ಡಯಾಬಿಟೀಸ್‌ ಆ್ಯಂಡ್‌ ಎಂಡೊಕ್ರಿನಾಲಜಿ’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಸಮೀಕ್ಷೆ ಪೂರ್ಣಗೊಂಡಿರುವ 15 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳ ನಗರ ಪ್ರದೇಶಗಳ ಬಡವರಲ್ಲಿ ಮಧುಮೇಹದ ಪ್ರಮಾಣ ಹೆಚ್ಚಿದೆ.

ದುಪ್ಪಟ್ಟು

ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ   ನಗರ ಪ್ರದೇಶಗಳಲ್ಲಿ  ಮಧುಮೇಹದ ಸರಾಸರಿ ಪ್ರಮಾಣ ಎರಡು ಪಟ್ಟು ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry