ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಸೆಮಿ ಕನಸು ಭಗ್ನ

ಬೆನ್‌ ಸ್ಟೋಕ್ಸ್‌ ಶತಕ: ರಶೀದ್‌ಗೆ ನಾಲ್ಕು ವಿಕೆಟ್‌
Last Updated 10 ಜೂನ್ 2017, 20:08 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಮಳೆ ಯಿಂದಾಗಿ ಎರಡು ಪಂದ್ಯಗಳಲ್ಲಿ ‘ಫಲ’ ಕಾಣದೆ ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡ ನಿರ್ಣಾಯಕ ಪಂದ್ಯದಲ್ಲಿ ಸೋಲುಂಡಿತು. ಈ ಮೂಲಕ ಚಾಂಪಿ ಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿತು.

ಎಜ್‌ಬಾಸ್ಟನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕಾಂಗರೂಗಳ ನಾಡಿನ ತಂಡ ಆತಿಥೇಯ ಇಂಗ್ಲೆಂಡ್‌ಗೆ ಡಕ್ವರ್ಥ್ ಲೂಯಿಸ್‌ ನಿಯಮದಡಿ 40 ರನ್‌ ಗಳಿಂದ ಮಣಿಯಿತು. ಆಸ್ಟ್ರೇಲಿಯಾ ಸೋತಿದ್ದರಿಂದ ಬಾಂಗ್ಲಾದೇಶದ ಭಾಗ್ಯದ ಬಾಗಿಲು ತೆರೆಯಿತು. ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧ ಅಮೋಘ ಜಯ ಸಾಧಿಸಿದ್ದ ಬಾಂಗ್ಲಾ ‘ಎ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ ಸೆಮಿಫೈನಲ್‌ ತಲುಪಿತು.

ಆಸ್ಟ್ರೇಲಿಯಾ ಮುಂದಿಟ್ಟ 278 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 35 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ನಾಯಕ ಎಯೊನ್ ಮಾರ್ಗನ್‌ (87; 81 ಎಸೆತ, 5 ಸಿ, 8 ಬೌಂ) ಮತ್ತು ಬೆನ್‌ ಸ್ಟೋಕ್ಸ್‌ (ಔಟಾಗದೆ 102, 109 ಎಸೆತ, 2 ಸಿ, 13 ಬೌಂ) ಅವರು ನಾಲ್ಕನೇ ವಿಕೆಟ್‌ಗೆ ಸೇರಿಸಿದ 159 ರನ್‌ ಪಂದ್ಯದ ದಿಕ್ಕನ್ನೇ ಬದಲಿ ಸಿತು. 41ನೇ ಓವರ್‌ನಲ್ಲಿ ತಂಡ 240 ರನ್‌ ಗಳಿಸಿದ್ದಾಗ ಧಾರಾಕಾರ ಮಳೆ ಸುರಿದ ಕಾರಣ ಪಂದ್ಯ ರದ್ದಾಯಿತು. ಅಷ್ಟರಲ್ಲಿ ಇಂಗ್ಲೆಂಡ್‌ ಡಕ್ವರ್ಥ್ ಲೂಯಿಸ್ ನಿಯಮದಡಿ ಗೆಲುವು ದಾಖಲಿಸಲು ಬೇಕಾದ ಮೊತ್ತಕ್ಕಿಂತ  ಸಾಕಷ್ಟು ಮುನ್ನಡೆ ಸಾಧಿಸಿತ್ತು.

ಫಿಂಚ್‌, ಸ್ಮಿತ್, ಹೆಡ್‌ ಮಿಂಚು: ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್‌ ಫಿಂಚ್‌, ನಾಯಕ ಸ್ಟೀವನ್ ಸ್ಮಿತ್‌ ಮತ್ತು ಟ್ರಾವಿಸ್ ಹೆಡ್‌ ಅವರ ಅಮೋಘ ಅರ್ಧಶತಕಗಳ ನೆರವಿನಿಂದ ಉತ್ತಮ ಮೊತ್ತ ಸೇರಿಸಿತು.

ಎರಡನೇ ವಿಕೆಟ್‌ಗೆ ಫಿಂಚ್‌ ಮತ್ತು ಸ್ಮಿತ್ 96 ರನ್ ಸೇರಿಸಿ ತಂಡವನ್ನು ನೂರರ ಗಡಿ ದಾಟಿಸಿದರು. 26ನೇ ಓವರ್‌ನಲ್ಲಿ ಫಿಂಚ್‌ (68; 64 ಎಸೆತ, 8 ಬೌಂಡರಿ) ಔಟಾದರು. ಆದರೆ ಟ್ರಾವಿಸ್‌ ಹೆಡ್‌ ಇನಿಂಗ್ಸ್‌ ಕಟ್ಟಿದರು. ಸ್ಮಿತ್‌ (56; 77 ಎಸೆತ, 5 ಬೌಂ) ಜೊತೆ 20 ರನ್‌ ಸೇರಿಸಿದ ಅವರು ಮ್ಯಾಕ್ಸ್‌ವೆಲ್‌ ಅವ ರೊಂದಿಗೆ ಐದನೇ ವಿಕೆಟ್‌ಗೆ 58 ರನ್‌ ಗಳಿಸಿ ತಂಡವನ್ನು 250ರ ಸಮೀಪಕ್ಕೆ ತಲುಪಿಸಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 277 (ಡೇವಿಡ್ ವಾರ್ನರ್‌ 21, ಆ್ಯರನ್‌ ಫಿಂಚ್‌ 68, ಸ್ಟೀವನ್‌ ಸ್ಮಿತ್‌ 56, ಟ್ರಾವಿಸ್ ಹೆಡ್‌ ಔಟಾಗದೆ 71, ಗ್ಲೆನ್‌ ಮ್ಯಾಕ್ಸ್‌ವೆಲ್‌ 20; ಮಾರ್ಕ್‌ ವುಡ್‌ 33ಕ್ಕೆ4, ಆದಿಲ್‌ ರಶೀದ್‌ 41ಕ್ಕೆ4); ಇಂಗ್ಲೆಂಡ್‌: 40.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 240 (ಎಯಾನ್‌ ಮಾರ್ಗನ್‌ 87, ಬೆನ್ ಸ್ಟೋಕ್ಸ್‌ ಔಟಾಗದೆ 102, ಜೋಸ್ ಬಟ್ಲರ್‌ ಔಟಾಗದೆ 29 ; ಜೋಶ್ ಹ್ಯಾಜಲ್‌ವುಡ್‌ 50ಕ್ಕೆ2). 

ಫಲಿತಾಂಶ: ಇಂಗ್ಲೆಂಡ್‌ಗೆ 40 ರನ್‌ಗಳ ಜಯ (ಡಕ್ವರ್ಥ್‌ ಲೂಯಿಸ್ ನಿಯಮದ ಅನ್ವಯ). ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT