ಪ್ರಧಾನಿ ಮೋದಿ ಜತೆ ಯೋಗ ಮಾಡಲು ಉಪವಾಸನಿರತ ಮುಸ್ಲಿಮರ ಒಲವು

7

ಪ್ರಧಾನಿ ಮೋದಿ ಜತೆ ಯೋಗ ಮಾಡಲು ಉಪವಾಸನಿರತ ಮುಸ್ಲಿಮರ ಒಲವು

Published:
Updated:
ಪ್ರಧಾನಿ ಮೋದಿ ಜತೆ ಯೋಗ ಮಾಡಲು ಉಪವಾಸನಿರತ ಮುಸ್ಲಿಮರ ಒಲವು

ಲಖನೌ: ರಂಜಾನ್ ಉಪವಾಸ ಮಾಡುತ್ತಿರುವ ಮುಸ್ಲಿಮರೂ ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಜತೆ ಯೋಗ ಮಾಡಲಿದ್ದಾರೆ.

ಜೂನ್ 21ರಂದು ಇಲ್ಲಿನ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. 55,000 ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

‘ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಕ್ಕಾಗಿ ಸಾವಿರಕ್ಕೂ ಹೆಚ್ಚು ಮುಸ್ಲಿಮರು ನಮ್ಮನ್ನು ಸಂಪರ್ಕಿಸಿದ್ದಾರೆ. ಈ ಪೈಕಿ 300 ಮುಸ್ಲಿಮರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಇವರೆಲ್ಲ ರಂಜಾನ್ ಉಪವಾಸ ಮಾಡುತ್ತಿದ್ದಾರೆ’ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಸಹ ಸಂಚಾಲಕ ಮಹಿರಾಜ್ ಧ್ವಜ್ ಸಿಂಗ್ ತಿಳಿಸಿದ್ದಾರೆ. ಯೋಗ ಮಾಡಲು ಮುಸ್ಲಿಮರಿಗಾಗಿಯೇ ಪ್ರತ್ಯೇಕ ಜಾಗ ಮೀಸಲಿರಿಸುವಂತೆ ಸಂಘಟಕರಲ್ಲಿ ಮನವಿ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.

‘ಉಪವಾಸ ಆಚರಿಸಿಕೊಂಡೇ ನಾನು ಸಹ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಉಪವಾಸ ಮತ್ತು ಯೋಗ ಎರಡೂ ಆರೋಗ್ಯಕ್ಕೆ ಒಳ್ಳೆಯದು’ ಎಂದು ವಕ್ಫ್ ಮತ್ತು ಹಜ್‌ ರಾಜ್ಯ ಖಾತೆ ಸಚಿವ ಮೊಶಿನ್ ರಾಜಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry