‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’: ಪಾಕ್‌ ಮಾಜಿ ಕ್ರಿಕೆಟಿಗನ ಟೀಕೆಗೆ ಸೆಹ್ವಾಗ್‌ ಟ್ವೀಟ್‌

7

‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’: ಪಾಕ್‌ ಮಾಜಿ ಕ್ರಿಕೆಟಿಗನ ಟೀಕೆಗೆ ಸೆಹ್ವಾಗ್‌ ಟ್ವೀಟ್‌

Published:
Updated:
‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’: ಪಾಕ್‌ ಮಾಜಿ ಕ್ರಿಕೆಟಿಗನ ಟೀಕೆಗೆ ಸೆಹ್ವಾಗ್‌ ಟ್ವೀಟ್‌

ನವದೆಹಲಿ: ಭಾರತ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ತಮ್ಮನ್ನು ಗುರಿಯಾಗಿರಿಸಿ ವಿಡಿಯೋ ಮೂಲಕ ಗುಡುಗಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ವಿಡಿಯೊಗೆ ಪ್ರತಿಕ್ರಿಯಿಸಲು ವಿರೇಂದ್ರ ಸೆಹ್ವಾಗ್‌ ನಿರಾಕರಿಸಿದ್ದಾರೆ.

2017ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ವಿರಾಟ್‌ ಕೋಹ್ಲಿ ನೇತೃತ್ವದ ಭಾರತ ತಂಡ 124ರನ್‌ ಅಂತರದಿಂದ ಮಣಿಸಿತ್ತು. ಹಾಗಾಗಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ಟ್ವಿಟರ್‌ ಮೂಲಕ ಭಾರತ ತಂಡವನ್ನು ಅಭಿನಂದಿಸಿದ್ದರು.

ಬಳಿಕ ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಬೀಗಿತ್ತು. ಮತ್ತು ರ‍್ಯಾಂಕಿಂಗ್‌ನಲ್ಲಿ ಕೆಳ ಕ್ರಮಾಂಕದಲ್ಲಿರುವ ಶ್ರೀಲಂಕಾ ವಿರುದ್ಧ ಭಾರತ ಸೋಲು ಕಂಡಿತ್ತು.

ಈ ಅವಕಾಶವನ್ನು ಬಳಸಿಕೊಂಡಿರುವ ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಶೀದ್‌ ಲತೀಫ್‌ ‘ಸೆಹ್ವಾಗ್‌ ಅವರಿಗೆ ವಿಶೇಷ ಪ್ರತಿಕ್ರಿಯೆ’ ಹೆಸರಿನ 15 ನಿಮಿಷಗಳ ವಿಡಿಯೋ ಹರಿಬಿಟ್ಟು ಸೆಹ್ವಾಗ್‌ರ ಕಾಲೆಳೆದಿದ್ದಾರೆ.

ವಿಡಿಯೊದ ಆರಂಭದಲ್ಲಿ ತಮ್ಮ ತಂಡ(ಪಾಕಿಸ್ತಾನ)ವನ್ನು ಅಭಿನಂದಿಸಿರುವ ಅವರು ಭಾರತ ತಂಡವನ್ನು ಕೆಳಮಟ್ಟದಲ್ಲಿ ಬಿಂಬಿಸಿದ್ದಾರೆ. ಜತೆಗೆ ಸೆಹ್ವಾಗ್‌ ನಮ್ಮನ್ನು ಗುರಿಯಾಗಿಸಿದರೆ ಯಾವುದೇ ತೊಂದರೆ ಇಲ್ಲ, ಆದರೆ, ದೇಶವನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

‘ಭಾರತದ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಸೌರವ್‌ಗಂಗೂಲಿ, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ರವಿಶಾಸ್ತ್ರಿ, ಅಜಯ್‌ ಜಡೇಜಾರನ್ನು ನಾನು ಗೌರವಿಸುತ್ತೇನೆ ಆದರೆ, ನೀವು ಎಲ್ಲಿಂದ ಬಂದಿದ್ದೀರಿ ಎಂಬುದೇ ನನಗೆ ಗೊತ್ತಿಲ್ಲ’ ಎಂದು ಸೆಹ್ವಾಗ್‌ ಅವರನ್ನು ಕಾಲೆಳೆದಿರುವ ಲತೀಫ್‌ ‘ಭಾರತದಲ್ಲಿರುವ ಎಲ್ಲಾ ಸ್ಮಾರಕಗಳು ನಮ್ಮ ಪೂರ್ವಜರು ಬಿಟ್ಟು ಬಂದಿರುವವು’ ಎಂದು ಹೇಳಿಕೊಂಡಿದ್ದಾರೆ. ನಮಗೆ ಭಾರತದದೊಂದಿಗೆ ನೀವು ಹೊಂದಿರುವುದಕ್ಕಿಂತಲೂ ದೊಡ್ಡ ಸಂಬಂಧವಿದೆ ಎಂದೂ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನೂ ದೂರಿರುವ ಅವರು, ಮಂಡಳಿಯಲ್ಲಿರುವ ಕೆಲವು ಸದಸ್ಯರು ತಂಡದ ಸದ್ಯದ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಆದರೆ ಈ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸೆಹ್ವಾಗ್‌, ‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’ ಎಂದು ಟ್ವೀಟ್‌ ಮಾಡಿ ಸುಮ್ಮನಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry