ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ: ಮಹತ್ವದ ಪಂದ್ಯದಲ್ಲಿ ಅಶ್ವಿನ್‌ಗೆ ಸ್ಥಾನ

7
ಉಭಯ ತಂಡಗಳಿಗೆ ಜಯ ಅನಿವಾರ್ಯ

ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ: ಮಹತ್ವದ ಪಂದ್ಯದಲ್ಲಿ ಅಶ್ವಿನ್‌ಗೆ ಸ್ಥಾನ

Published:
Updated:
ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ: ಮಹತ್ವದ ಪಂದ್ಯದಲ್ಲಿ ಅಶ್ವಿನ್‌ಗೆ ಸ್ಥಾನ

ಕೆನ್ನಿಂಗ್ಟನ್‌ ಓವೆಲ್‌(ಲಂಡನ್‌): ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ತಂಡ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ಭಾರತ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದರೆ, ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಸೋತಿತ್ತು. ಹಾಗಾಗಿ ಎರಡೂ ತಂಡಗಳು ವಿಜಯದ ಮೇಲೆ ಕಣ್ಣಿಟ್ಟಿವೆ.

‘ಬಿ’ ಗುಂಪಿನಲ್ಲಿರುವ ಎಲ್ಲಾ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿರುವುದರಿಂದ,ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ನೇರವಾಗಿ ಸೆಮಿಫೈನಲ್‌ ಹಂತಕ್ಕೇರಲಿದೆ. ‘ಎ’ ಗುಂಪಿನಿಂದ ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಸೆಮಿಫೈನಲ್‌ ತಲುಪಿವೆ.

ಈ ಪಂದ್ಯಲ್ಲಿ ಉಮೇಶ್‌ ಯಾದವ್‌ ಬದಲಿಗೆ ಅಶ್ವಿನ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಎಬಿ ಡಿ ವಿಲಿಯರ್ಸ್‌ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 29 ರನ್‌ಗಳಿಸಿದ್ದು, ಆರಂಭಿಕರಾದ ಕ್ವಿಂಟಾನ್‌ ಡಿಕಾಕ್‌(17) ಮತ್ತು  ಹಾಶೀಂ ಆಮ್ಲಾ(10) ಕ್ರೀಸ್‌ನಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry