ಅಳಿಯ ಅಹಿಲ್ ಜತೆ ಸಲ್ಲು

7

ಅಳಿಯ ಅಹಿಲ್ ಜತೆ ಸಲ್ಲು

Published:
Updated:
ಅಳಿಯ ಅಹಿಲ್ ಜತೆ ಸಲ್ಲು

‘ಟ್ಯೂಬ್‌ಲೈಟ್‌’ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಅಳಿಯ ಅಹಿಲ್ ಜತೆ ಬಿಂದಾಸ್ ಆಗಿ ವಿದೇಶ ಸುತ್ತುತ್ತಿದ್ದಾರಂತೆ.

ತಂಗಿ ಅರ್ಪಿತಾಳ ಮಗು ಅಹಿಲ್ ಈಗ ಒಂದು ವರ್ಷದವನಾಗಿದ್ದು, ಸಲ್ಲು ಮಾಮು ಜತೆಗೆ ವಿಶೇಷ ಬಾಂಧವ್ಯ ಹೊಂದಿದ್ದಾನಂತೆ.

ಶೂಟಿಂಗ್, ಶಾಪಿಂಗ್ ಎಲ್ಲೆಡೆಯೂ ಅಳಿಯ ಮಾಮಾನದ್ದೇ ಕಾರುಬಾರು. ಮೊನ್ನೆ ಹಾಂಗ್‌ಕಾಂಗ್‌ನ ಶಾಪಿಂಗ್ ಮಾಲ್‌ವೊಂದರಲ್ಲಿ ಸಲ್ಲು ಬೇಬಿಸ್ಲಿಂಗ್ ಬ್ಯಾಗಿನಲ್ಲಿ ಅಹಿಲ್‌ನನ್ನು ಕೂರಿಸಿಕೊಂಡು ಶಾಪಿಂಗ್ ಮಾಡಿದ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಸಲ್ಲು ಅಳಿಯ ಅಹಿಲ್‌ಗಾಗಿ ಸಮಯ ಉಳಿಸಿಕೊಂಡು ಆಟವಾಡುತ್ತಿರುವ ಚಿತ್ರಗಳೂ ಸಖತ್ ಫೇಮಸ್ ಆಗಿವೆ.

ಅಹಿಲ್‌ನನ್ನು ಎತ್ತಿಕೊಂಡು ಎದೆಮೇಲೆ ನಿಲ್ಲಿಸಿಕೊಂಡಿರುವ ಚಿತ್ರಗಳಂತೂಸಲ್ಲು ಅಭಿಮಾನಿಗಳಿಗೆ ಖುಷಿ ತಂದಿದೆಯಂತೆ. ಅಂದ ಹಾಗೆ ಅಹಿಲ್ ಹುಟ್ಟಿದಾಗ ಸಲ್ಲು ಬಿಎಂಡಬ್ಲ್ಯು ಕಾರನ್ನು ಅಳಿಯನಿಗೆ ಉಡುಗೊರೆಯಾಗಿ ಕೊಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry