ರಣಬೀರ್‌ ಆಹಾರ ಸೂತ್ರ ಮತ್ತು ಮೈಮಾಟ

7

ರಣಬೀರ್‌ ಆಹಾರ ಸೂತ್ರ ಮತ್ತು ಮೈಮಾಟ

Published:
Updated:
ರಣಬೀರ್‌ ಆಹಾರ ಸೂತ್ರ ಮತ್ತು ಮೈಮಾಟ

ಮುದ್ದು ಮುಖದ ನಟ ರಣಬೀರ್‌ ಕಪೂರ್‌ಗೆ ಹೃತಿಕ್ ರೋಷನ್‌, ಟೈಗರ್‌ ಶ್ರಾಫ್‌ ಅವರಂತೆ ಹುರಿಗಟ್ಟಿದ ದೇಹ ಇಲ್ಲದಿದ್ದರೂ ಮೈಮಾಟ ಆಕರ್ಷಕವಾಗಿಯೇ ಇದೆ.

33 ವರ್ಷದ ರಣಬೀರ್‌ ಕಪೂರ್‌ ಇನ್ನು 20ರ ಹರೆಯದವರಂತೆ ಕಾಣಲು ಅವರ ಆಹಾರ ಪದ್ಧತಿ, ಜೀವನ ಶೈಲಿ, ವ್ಯಾಯಾಮವೇ ಕಾರಣ.

ಬಾಲಿವುಡ್‌ನ ಈ ಪ್ರತಿಭಾನ್ವಿತ ಕಲಾವಿದ ಸಿಕ್ಸ್‌ಪ್ಯಾಕ್‌ಗಿಂತಲೂ ಹೆಚ್ಚಾಗಿ ಅಭಿನಯವನ್ನು ನೆಚ್ಚಿಕೊಂಡವರು. ಹಾಗಾಗಿ ಜಿಮ್‌ನಲ್ಲಿ ಹೆಚ್ಚು ಹೊತ್ತು ಕಳೆಯುವುದಿಲ್ಲ. ಫಿಟ್‌ ಆಗಿರಲು ಎಷ್ಟು ಬೇಕೊ ಅಷ್ಟು ಮಾತ್ರ ವ್ಯಾಯಾಮ ಮಾಡುತ್ತಾರೆ. ದಿನಕ್ಕೆ 30 ರಿಂದ 50 ನಿಮಿಷ ಅಷ್ಟೇ ಜಿಮ್‌ನಲ್ಲಿ ಕಳೆಯುವುದು. ಪಾತ್ರಕ್ಕೆ ಅವಶ್ಯವಾಗಿದ್ದರೆ ಮಾತ್ರ ಹೆಚ್ಚು ಕಾಲ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ.

ಜಿಮ್‌ನಲ್ಲಿ 10 ನಿಮಿಷ ಟ್ರೆಡ್‌ಮಿಲ್‌ ಓಟ, ನಂತರ ಪುಲ್‌ಅಪ್ಸ್‌, ಬಸ್ಕಿ, ಕಾಲಿಗೆ, ಎದೆಗೆ ಸಂಬಂಧಿಸಿದ ವ್ಯಾಯಾಮ, ತೋಳಿಗೆ ಸಂಬಂಧಿಸಿದ ವ್ಯಾಯಾಮ ಮಾಡುತ್ತಾರೆ. ಜಿಮ್‌ ಜೊತೆಗೆ ನಿಯಮಿತವಾಗಿ ಯೋಗವನ್ನೂ ಮಾಡುತ್ತಾರೆ.

ರಣಬೀರ್ ಫಿಟ್‌ನೆಸ್‌ನಲ್ಲಿ ಆಹಾರದ್ದು ಪ್ರಮುಖ ಪಾತ್ರ. ಆಹಾರದಲ್ಲಿ ಪ್ರೊಟೀನ್ಸ್‌ ಹೆಚ್ಚಿಗೆ ಇರುವಂತೆ ನೋಡಿಕೊಳ್ಳುತ್ತಾರೆ.

ಬೆಳಿಗ್ಗೆ ತಿಂಡಿ: ಬ್ರೌನ್ ಬ್ರೆಡ್, ಮೊಟ್ಟೆಯ ಬಿಳಿ ಭಾಗ, ಹಾಲು, ಕಾರ್ನ್‌ಫ್ಲೇಕ್ಸ್‌, ಬಾಳೆಹಣ್ಣು ಮತ್ತು ಹಣ್ಣಿನ ಜ್ಯೂಸ್‌.

ಮಧ್ಯಾಹ್ನ ಊಟ: ಚಪಾತಿ ಮತ್ತು ಧಾನ್ಯಗಳು ಮತ್ತು ತರಕಾರಿ ಹಾಕಿ ಮಾಡಿದ ದಾಲ್‌, ತಂದೂರಿ ಚಿಕನ್ ಮತ್ತು ಮೊಸರು.

ಸಂಜೆ: ಗ್ರೀನ್‌ಟೀ, ಹಣ್ಣಿನ ಜ್ಯೂಸ್‌.

ರಾತ್ರಿ ಊಟಕ್ಕೆ: ಚಿಕನ್, ಸ್ಯಾಮನ್‌ ಜಾತಿಯ ಮೀನು ಪ್ರೊಟೀನ್‌ಯುಕ್ತ ಪಾನೀಯಗಳು.

***

ಎತ್ತರ: 6 ಅಡಿ

ತೂಕ: 69 ಕೆ.ಜಿ

ಎದೆಯ ಅಗಲ: 40 ಇಂಚು

ಸೊಂಟ: 30 ಇಂಚು

ತೋಳುಗಳ ಬೈಸೆಪ್ಸ್‌: 14 ಇಂಚು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry