ಮೋಸಗಾರರಿಗೇ ಮೋಸ

7

ಮೋಸಗಾರರಿಗೇ ಮೋಸ

Published:
Updated:
ಮೋಸಗಾರರಿಗೇ ಮೋಸ

ಸ್ಪೇನ್‌ನ ಗಿರೊನಾ ಪಟ್ಟಣದ ಇಬ್ಬರು ಸಹೋದರರು ಪ್ರಯಾಸಪಟ್ಟು ಬೆಲೆಬಾಳುವ 80X60 ಸೆಂ.ಮೀ ಅಳತೆಯ ಪೇಂಟಿಂಗ್‌ವೊಂದನ್ನು 2003ರಲ್ಲಿ ಕಡಿಮೆ ದರಕ್ಕೆ ಖರೀದಿಸಿದರು. ಅದು ಸ್ಪಾನಿಷ್‌ ಕಲಾವಿದ ಆಂಟೊನಿಯೊ ಮರಿಯಾ ಅವರ ಭಾವಚಿತ್ರವಾಗಿತ್ತು. ಅದನ್ನು ಮಾರಿದರೆ ಕೋಟಿಗಟ್ಟಲೆ ಹಣ ಸಿಗುತ್ತೆ. ವಿಲಾಸಿ ಜೀವನ ನಡೆಸಬಹುದು ಎಂದು ಕನಸು ಕಂಡರು.

ಆದರೆ ಅವರ ಕನಸು ನುಚ್ಚುನೂರಾಯಿತು. ಈ ಪೇಟಿಂಗ್‌ ಅಸಲಿ ಆಗಿರಲಿಲ್ಲ. ಅದರ ದಾಖಲೆ ಪತ್ರಗಳೂ ಸಹ ನಕಲಿ ಎಂದು ಹರಾಜಿನಲ್ಲಿ ತಜ್ಞರು ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟರು.

ಇದರಿಂದ ಬೇಸರಗೊಂಡ ಗಿರೊನಾ ಸಹೋದರರು, ಯಾರಾದರೂ ಅಮಾಯಕರು ಸಿಕ್ಕರೆ ಅವರಿಗೆ ಮಾರಿ ಹಣ ಮಾಡಿಕೊಳ್ಳಬೇಕು ಎಂದು ಕಾದರು. ಕೊನೆಗೆ ವಿವಿಧ ದೇಶಗಳ ಪೇಟಿಂಗ್‌ಗಳನ್ನು ಸಂಗ್ರಹಿಸುವ ಹವ್ಯಾಸವಿದ್ದ ಅರಬ್‌ ಶೇಕ್‌ ಒಬ್ಬರು 2014 ಡಿಸೆಂಬರ್‌ನಲ್ಲಿ ಇವರ ಕಣ್ಣಿಗೆ ಬಿದ್ದರು.

ಇವರ ಬಳಿ ಇರುವ ಪೇಂಟಿಂಗ್‌ ಕೊಳ್ಳುವುದಾಗಿ ಶೇಕ್‌ ಒಪ್ಪಿಕೊಂಡು 1.7 ದಶಲಕ್ಷ ಸ್ವಿಸ್‌ ಫ್ರಾಂಕ್‌ಗಳನ್ನು (ಸುಮಾರು ₹ 10.84 ಕೋಟಿ) ಕೈಗಿಟ್ಟರು. ಆದರೆ ಅರಬ್‌ ಶೇಕ್‌, ಗಿರೊನಾ ಸಹೋದರರ ಕೈಗೆ ಹಣವಷ್ಟೇ ನೀಡಲಿಲ್ಲ. ಕಿವಿಗೆ ಹೂ ಇಟ್ಟರು.

ಈ ಸೋದರರು ಹಣವನ್ನು ಜಮಾ ಮಾಡಲು ಬ್ಯಾಂಕ್‌ಗೆ ಹೋದಾಗ ಅಲ್ಲಿನ ಸಿಬ್ಬಂದಿ ‘ಯಾರೋ ಭಾರಿ ಪ್ರಮಾಣದಲ್ಲಿ ನಕಲಿ ನೋಟು ತಂದಿದ್ದಾರೆ’ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟರು. ಪೊಲೀಸರು ಇವರಿಬ್ಬರನ್ನೂ ಬಂಧಿಸಿ ಜೈಲಿಗಟ್ಟಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry