ಯೋಗ: ವಿಶ್ವ ದಾಖಲೆ ನಿರ್ಮಿಸಿದ ಖುಷಿ

7

ಯೋಗ: ವಿಶ್ವ ದಾಖಲೆ ನಿರ್ಮಿಸಿದ ಖುಷಿ

Published:
Updated:
ಯೋಗ: ವಿಶ್ವ ದಾಖಲೆ ನಿರ್ಮಿಸಿದ ಖುಷಿ

ಮೈಸೂರು: ಯೋಗಪಟು ಎಚ್‌.ಖುಷಿ ಅವರು ಭಾನುವಾರ ಇಲ್ಲಿ ನಡೆದ ಯೋಗಾಸನ ಪ್ರದರ್ಶನದಲ್ಲಿ ವಿಶ್ವ ದಾಖಲೆ ನಿರ್ಮಿಸಿದರು.

ನೋಟು ಮುದ್ರಣ ನಗರದ ಸಮುದಾಯದ ಭವನದಲ್ಲಿ ನಿರಾಲಂಬ ಪೂರ್ಣ ಚಕ್ರಾಸನ ಭಂಗಿ ಹೋಲುವ ಕಲಾತ್ಮಕ ಯೋಗ (ಬ್ಯಾಕ್‌ ಪ್ಲಾಂಕ್‌ ರಿಕ್ಲೈನ್‌ ಕ್ರಂಚರ್‌) ಪ್ರದರ್ಶನ ನೀಡಿ ಈ ಸಾಧನೆ ಮಾಡಿದರು.

ನಿಂತುಕೊಂಡೇ ಒಂದು ನಿಮಿಷದಲ್ಲಿ 15 ಬಾರಿ ಹಿಮ್ಮುಖವಾಗಿ ಭಾಗಿ ತಲೆ ಹಾಗೂ ಬೆನ್ನನ್ನು ನೆಲಕ್ಕೆ ಸ್ಪರ್ಶಿಸಿ ಕೇವಲ ಹಿಮ್ಮಡಿ ಬಲದಿಂದಲೇ ಮೇಲೆದ್ದರು.

ಈ ಸಾಧನೆಗಾಗಿ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಪ್ರತಿನಿಧಿ ಸಂತೋಷ್‌ ಅಗರವಾಲ್‌ ಪ್ರಶಸ್ತಿಪತ್ರ ನೀಡಿದರು.

ಸೇಂಟ್‌ ಜೋಸೆಫ್‌ ಸೆಂಟ್ರಲ್‌ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಖುಷಿ ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದಾರೆ.

ಶಾಂಘೈನಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ, ವಿಯೆಟ್ನಾಂನಲ್ಲಿ ನಡೆದ ಏಷ್ಯನ್‌ ಯೋಗ ಚಾಂಪಿಯನ್‌ಷಿಪ್‌ನ ಆರ್ಟಿಸ್ಟಿಕ್‌ ವಿಭಾಗದಲ್ಲಿ ಚಿನ್ನದ ಪದಕ, ರಿದಮಿಕ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry