ಕಾನೂನು ಸಚಿವಾಲಯದಿಂದ ‘ಸುಪ್ರೀಂ’ಗೆ ಪತ್ರ

7
ನ್ಯಾಯಾಧೀಶರ ನೇಮಕಕ್ಕೆ ‘ನೀಟ್‌’ ಮಾದರಿ ಪರೀಕ್ಷೆ

ಕಾನೂನು ಸಚಿವಾಲಯದಿಂದ ‘ಸುಪ್ರೀಂ’ಗೆ ಪತ್ರ

Published:
Updated:
ಕಾನೂನು ಸಚಿವಾಲಯದಿಂದ ‘ಸುಪ್ರೀಂ’ಗೆ ಪತ್ರ

ನವದೆಹಲಿ: ಕೆಳಹಂತದ ಕೋರ್ಟ್‌ಗಳ ನ್ಯಾಯಾಧೀಶರನ್ನು ನೇಮಕ ಮಾಡಲು  ಪದವಿಪೂರ್ವ ಹಾಗೂ ಪದವಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ‘ನೀಟ್‌’ ಮಾದರಿ ಪರೀಕ್ಷೆಯನ್ನು ನಡೆಸುವಂತೆ  ಕಾನೂನು ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದೆ.

ನ್ಯಾಯಾಧೀಶರ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ  ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯನ್ನು  ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಏಪ್ರಿಲ್‌

ನಲ್ಲಿ ಸಭೆ ನಡೆದಿತ್ತು. ಸರ್ಕಾರದ ವಿವಿಧ ಇಲಾಖೆಗಳ ಹಾಗೂ ನ್ಯಾಯಾಂಗ ಇಲಾಖೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಆದರ್ಶ ಗೋಯೆಲ್‌  ಅವರು ಅಧ್ಯಕ್ಷತೆ ವಹಿಸಿದ್ದರು.

ನೇಮಕಾತಿಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ರೂಪಿಸುವ ಅಗತ್ಯದ ಕುರಿತು ಅವರು ಅಭಿಪ್ರಾಯ ಪಟ್ಟಿದ್ದರು. ಆದುದರಿಂದ ಸಭೆಯಲ್ಲಿ ಚರ್ಚೆಗೊಂಡ ಅಂಶಗಳನ್ನು ಸಚಿವಾಲಯವು ಈ ಪತ್ರದಲ್ಲಿ ಉಲ್ಲೇಖಿಸಿದ್ದು ಅದನ್ನು ಸುಪ್ರೀಂಕೋರ್ಟ್‌ಗೆ ಕಳುಹಿಸಿದೆ.

ಸದ್ಯ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಹೈಕೋರ್ಟ್‌ ಹಾಗೂ ಆಯಾ ರಾಜ್ಯಗಳ ಸೇವಾ ಆಯೋಗಗಳು ನಡೆಸುತ್ತಿವೆ. ಆದರೆ ಇದರ ಬದಲಾವಣೆ ಅಗತ್ಯವಿದೆ ಎಂದು ಸಚಿವಾಲಯ ತಿಳಿಸಿದೆ. ಸುಪ್ರೀಂಕೋರ್ಟ್‌ನ ಬೇಸಿಗೆ ರಜೆ ಮುಗಿದ ಮೇಲೆ ಈ ಪತ್ರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. 

ಪ್ರಸ್ತಾವದಲ್ಲಿ ಇರುವ ಅಂಶಗಳು: ಸುಪ್ರೀಂಕೋರ್ಟ್‌ನ   ಮೇಲ್ವಿಚಾರಣೆಯಲ್ಲಿ ಕೇಂದ್ರೀಕೃತ  ಪರೀಕ್ಷೆ ನಡೆಸುವುದು, ‘ನ್ಯಾಯಾಧೀಶರ ನೇಮಕಾತಿ ಸಮಿತಿ’ಯನ್ನು ರಚಿಸಿ ಪರೀಕ್ಷೆ ನಡೆಸುವುದು, ಪರೀಕ್ಷೆ ನಡೆಸುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಮನವಿ ಮಾಡಿಕೊಳ್ಳುವುದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೇಮಕಾತಿ ನಡೆಸುವಾಗ ಅನುಸರಿಸುವ ವಿಧಾನಗಳನ್ನು ನ್ಯಾಯಾಧೀಶರ ನೇಮಕಕ್ಕೂ ಅಳವಡಿಸಿಕೊಳ್ಳುವುದು. ಈ ಎಲ್ಲಾ ಪ್ರಸ್ತಾವಗಳು ಪತ್ರದಲ್ಲಿ ಉಲ್ಲೇಖಗೊಂಡಿವೆ.

ಅಖಿಲ ಭಾರತ ನಾಗರಿಕ ಸೇವಾ ಇಲಾಖೆಯನ್ನು ಹೋಲುವ ರಾಷ್ಟ್ರಮಟ್ಟದ ನ್ಯಾಯಾಂಗ ಸೇವೆ ಸ್ಥಾಪಿಸುವ ಬಗ್ಗೆ 1960ರಲ್ಲಿಯೇ ಚರ್ಚೆ ನಡೆದಿತ್ತು. ಆದರೆ ಹಲವು ರಾಜಕೀಯ ಮುಖಂಡದ ವಿರೋಧದಿಂದಾಗಿ ಅದು ಜಾರಿಗೆ ಬಂದಿರಲಿಲ್ಲ. ಈಗಲೂ ಈ ಪ್ರಸ್ತಾವಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry