ಗಂಗಾ ನದಿ ಮಲಿನಗೊಳಿಸಿದರೆ ಕಠಿಣ ಶಿಕ್ಷೆ?

7

ಗಂಗಾ ನದಿ ಮಲಿನಗೊಳಿಸಿದರೆ ಕಠಿಣ ಶಿಕ್ಷೆ?

Published:
Updated:
ಗಂಗಾ ನದಿ ಮಲಿನಗೊಳಿಸಿದರೆ ಕಠಿಣ ಶಿಕ್ಷೆ?

ನವದೆಹಲಿ: ದರೋಡೆ, ವಂಚನೆ ಮೊದಲಾದ ಪ್ರಕರಣಗಳ ಅಪರಾಧಗಳಂತೆಯೇ ಗಂಗಾ ನದಿಯನ್ನು ಮಲಿನಗೊಳಿಸುವವರಿಗೂ ಏಳು ವರ್ಷ ಜೈಲು ಶಿಕ್ಷೆ ನೀಡುವಂತೆ ಕೇಂದ್ರ ಸರ್ಕಾರ ನೇಮಕ ಮಾಡಿರುವ ಸಮಿತಿಯು ಕರಡು ಮಸೂದೆಯಲ್ಲಿ ಶಿಫಾರಸು ಮಾಡಿದೆ.

ಈ ಮಸೂದೆ ಅಂಗೀಕಾರವಾದರೆ  ಜೈಲು ಶಿಕ್ಷೆಯ ಜೊತೆ ₹100 ಕೋಟಿ ವರೆಗೆ ದಂಡ ಕೂಡ ವಿಧಿಸಬಹುದಾಗಿದೆ.

ಗಂಗಾ ನದಿಯ ನೀರಿನ ಹರಿವಿಗೆ ತಡೆ ಉಂಟು ಮಾಡುವುದು, ನದಿ ದಡದಲ್ಲಿ ಗಣಿಗಾರಿಗೆ ಹಾಗೂ ಅನುಮತಿ ಇಲ್ಲದೆ ಕಟ್ಟೆ ನಿರ್ಮಿಸುವುದು  ಇದರನ್ವಯ ಅಪರಾಧವಾಗಿದೆ.

‘ಗಂಗಾನದಿ ಮತ್ತು ಅದರ ಉಪ ನದಿಗಳ 1ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು  ನೀರು ಉಳಿತಾಯ ವಲಯ  ಎಂದು ಘೋಷಿಸಬೇಕು’ ಎಂದು  ನಿವೃತ್ತ ನ್ಯಾಯಮೂರ್ತಿ ಗಿರಿಧರ ಮಾಳವೀಯ ನೇತೃತ್ವದ ಸಮಿತಿಯು ಸಲಹೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry