ವಿಂಬಲ್ಡನ್‌ಗೆ ಶರಪೋವಾ ಅಲಭ್ಯ

7

ವಿಂಬಲ್ಡನ್‌ಗೆ ಶರಪೋವಾ ಅಲಭ್ಯ

Published:
Updated:
ವಿಂಬಲ್ಡನ್‌ಗೆ ಶರಪೋವಾ ಅಲಭ್ಯ

ಲಂಡನ್ : ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ ಅವರು ವಿಂಬಲ್ಡನ್‌ನಲ್ಲಿ ಕಣಕ್ಕಿಳಿಯುವುದಿಲ್ಲ.ತೊಡೆಯ ಗಾಯದಿಂದ ಅವರು ಬಳಲುತ್ತಿದ್ದಾರೆ. ವಿಶ್ರಾಂತಿಯ ಅಗತ್ಯ ವಿರುವುದರಿಂದ ಅವರು ಈ ಬಾರಿಯ ವಿಂಬಲ್ಡನ್‌ನಲ್ಲಿ ಆಡುತ್ತಿಲ್ಲ. ಶರಪೋವಾ 2004ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. 30 ವರ್ಷದ ಶರಪೋವಾ ಅವರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ 15 ತಿಂಗಳುಗಳ ಅಮಾನತು ಶಿಕ್ಷೆ ಅನುಭವಿಸಿದ್ದರು. ಶಿಕ್ಷೆ ಮುಗಿದ ನಂತರ ಅವರು ಹೋದ ಏಪ್ರಿಲ್‌ನಲ್ಲಿ ಸ್ಟಟ್‌ ಗರ್ಟ್ ಟೂರ್ನಿಯಲ್ಲಿ ಆಡಿದ್ದರು. ಅದರಲ್ಲಿ ಅವರು ಸೆಮಿಫೈನಲ್ ತಲುಪಿದ್ದರು. ನಂತರ ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಆಡಿದ್ದರು.ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಗಾಯಗೊಂಡಿದ್ದ ಅವರು ಹಿಂದೆ ಸರಿದಿದ್ದರು. ಆದರೆ ಅವರು ವಿಂಬಲ್ಡನ್‌ನಲ್ಲಿ ಆಡುವ ನಿರೀಕ್ಷೆ ಇತ್ತು. ಜುಲೈ 3ರಿಂದ ಟೂರ್ನಿ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry