ಸಂದೀಪ್‌, ಅಕ್ಷತಾಗೆ ಪ್ರಶಸ್ತಿ

7
ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದ ಸ್ಪರ್ಧೆ

ಸಂದೀಪ್‌, ಅಕ್ಷತಾಗೆ ಪ್ರಶಸ್ತಿ

Published:
Updated:
ಸಂದೀಪ್‌, ಅಕ್ಷತಾಗೆ ಪ್ರಶಸ್ತಿ

ಗದಗ: ಸ್ಥಳೀಯ ಅಥ್ಲೀಟ್ ಎನ್. ಸಂದೀಪ್‌  ಮತ್ತು ದಾವಣಗೆರೆಯ ಡಿಎಸ್‌ಸಿ ಕ್ಲಬ್‌ನ ಎ.ಅಕ್ಷತಾ ಅವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ಆಶ್ರಯದಲ್ಲಿ ಭಾನುವಾರ ಇಲ್ಲಿ ನಡೆದ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ  ಪ್ರಶಸ್ತಿ ಗೆದ್ದರು.ಪುರುಷರ ವಿಭಾಗದ ಸ್ಪರ್ಧೆಯ ಆರಂಭದಿಂದಲೂ ಆತ್ಮವಿಶ್ವಾಸದಿಂದ ಓಡಿದ ಸಂದೀಪ್‌, ನಾಲ್ಕು ಕಿ.ಮೀ. ದೂರ ಕ್ರಮಿಸಿದ ಮೇಲೆ ಮುನ್ನಡೆ ಸಾಧಿಸಿದರು. ಅದನ್ನು ಕೊನೆಯವರೆಗೂ ಕಾಪಾಡಿಕೊಂಡರು.ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ದೇಶಪಾಂಡೆ ಪ್ರತಿಷ್ಠಾನ ಆಯೋಜಿಸಿದ್ದ ವಾಟರ್‌ ಮ್ಯಾರಥಾನ್‌ನ 10 ಕಿ.ಮೀ ವಿಭಾಗದಲ್ಲೂ ಸಂದೀಪ್‌ ಮೊದಲಿಗರಾಗಿ ಪ್ರಶಸ್ತಿ ಜಯಿಸಿದ್ದರು.ಸಂದೀಪ್‌ ಗುರಿ ತಲುಪಿದಾಗ ಅವರ ಬೆನ್ನ ಹಿಂದೆಯೇ ಓಡಿದ್ದ ಸಂದೀಪ್‌ ನವಲೇಕರ್‌ ಸುಮಾರು 20 ಮೀಟರ್‌ ಗಳಷ್ಟು ದೂರದಲ್ಲಿದ್ದರು. ಸಂದೀಪ್‌, ಗದುಗಿನ ಕೆಎಲ್‌ಇ ಕಾಲೇಜಿನಲ್ಲಿ ಮೊದ ಲನೆಯ ವರ್ಷದ ಪದವಿ ಓದುತ್ತಿದ್ದಾರೆ.ಅಕ್ಷತಾಗೆ ನಾಲ್ಕನೇ ಬಾರಿ ಪ್ರಶಸ್ತಿ: ದಾವಣಗೆರೆಯಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವ ಅಕ್ಷತಾ ಅಲ್ಲಿನ ಡಿಎಸ್‌ಸಿ ಕ್ಲಬ್‌ನ ಸದಸ್ಯರು. ಎರಡು ವರ್ಷದಿಂದ ಅದೇ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.ಉಡುಪಿಯಲ್ಲಿ ನಡೆದಿದ್ದ ಇದೇ ಸ್ಪರ್ಧಾಕೂಟದಲ್ಲಿ ಮೊದಲ ಸ್ಥಾನ ಗಳಿಸಿದ್ದ ಇವರು, ಚಾಮರಾಜನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಕಳೆದ ವರ್ಷ ಹಾವೇರಿಯಲ್ಲಿ ನಡೆದ ಸ್ಪರ್ಧೆಯಲ್ಲೂ ಮೊದಲಿ ಗರಾಗಿ ಗುರಿ ಮುಟ್ಟಿದ್ದರು. ಇದೀಗ ಗದು ಗಿನಲ್ಲಿ ನಾಲ್ಕನೆಯ ಬಾರಿ ಅವರು ಪ್ರಶಸ್ತಿ ಗಳಿಸಿದ್ದಾರೆ. ಈ ಹಿಂದೆ ದಕ್ಷಿಣ ವಲಯ ಅಥ್ಲೆಟಿಕ್ಸ್‌ನ 20 ವರ್ಷ ವಯಸ್ಸಿನೊಳಗಿ ನವರ ವಿಭಾಗದ 5 ಸಾವಿರ ಮೀಟರ್‌ ಓಟದಲ್ಲಿ 2ನೇ ಸ್ಥಾನ ಪಡೆದಿದ್ದರು.ಬಾಲಕರ ವಿಭಾಗದಲ್ಲಿ ಬೆಳಗಾವಿಯ ಬನ್ನಪ್ಪ ಎಂ. ಒಡೆಯರ ಮತ್ತು ಬಾಲಕಿ ಯರ ವಿಭಾಗದಲ್ಲಿ ಗದುಗಿನ ಸೋನಿಯಾ ಜಾಧವ್‌ ಮೊದಲಿಗರಾಗಿ ಗುರಿ ಮುಟ್ಟಿ ಪ್ರಶಸ್ತಿ ಗೆದ್ದರು.

ನಾಲ್ಕೂ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಸ್ಥಳೀಯ  ಸ್ಪರ್ಧಿಗಳು ನಾಲ್ಕು ವಿಭಾಗಗಳ ಮೊದಲ ಹತ್ತು ಸ್ಥಾನಗಳಲ್ಲಿ ಒಟ್ಟು 21  ಸ್ಥಾನಗಳನ್ನು ಪಡೆದಿದ್ದಾರೆ. ಮಹಿಳೆಯರ ಮತ್ತು ಬಾಲಕರ ವಿಭಾಗಗಳಲ್ಲಿ ವಿಜಯ ಪುರದ ಸ್ಪರ್ಧಿಗಳು ಒಟ್ಟು 3 ಸ್ಥಾನಗಳನ್ನು ಗೆದ್ದುಕೊಂಡರು.ಭಾನುವಾರ ಬೆಳಗಿನ ಜಾವ ನಡೆದ ರಸ್ತೆ ಓಟ ಎಲ್ಲರ ಗಮನ ಸೆಳೆಯಿತು. ಜಿಲ್ಲಾ ಕ್ರೀಡಾಂಗಣದಿಂದ ಸಂಬಾಪುರ ಕೆಳಸೇತುವೆ ತನಕ ಸಾಗಿದ ರಸ್ತೆ ಓಟವನ್ನು ವಿವಿಧೆಡೆ ಜನರು ನಿಂತು ವೀಕ್ಷಿಸಿದರು.ಸಮಾರೋಪದಲ್ಲಿ ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಮಂಜುನಾಥ ಚವ್ಹಾಣ  ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ ಪಾಲ ಕ್ಷೀರಸಾಗರ ಪ್ರಶಸ್ತಿ ವಿತರಿಸಿದರು. ಡೆಕ್ಕನ್‌ ಅಥ್ಲೆಟಿಕ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಅನಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ಫಲಿತಾಂಶ

ಪುರುಷರ ವಿಭಾಗ: ಎನ್. ಸಂದೀಪ್‌   (ಗದಗ), (ಕಾಲ: 40ನಿ. 39ಸೆ.)–1, ಸಂದೀಪ ನವಲೇಕರ್ (ಗದಗ) (40ನಿ. 42ಸೆ.)–2, ರಾಜ (ಕರ್ನಾಟಕ ರಾಜ್ಯ ಪೊಲೀಸ್‌ ತಂಡ, ಬೆಂಗಳೂರು). (42ನಿ. 18ಸೆ.)–3, ಸುನಿಲ್‌ ಎನ್‌.ಬಿ (ಹುಬ್ಬಳ್ಳಿ) (43ನಿ. 20ಸೆ.)–4, ವಿರೇಶ ಎಸ್‌.ಬಿ (ಹೊಂಬಳ) (44ನಿ.46ಸೆ.)–5, ಮಂಜು ನಾಥ ಸಿ.ದೇಸಾಯಿ (ಹರ್ಲಾ ಪುರ) (44ನಿ. 51ಸೆ.)–6, ನವೀನ್‌ ಕೆ.ಎನ್‌ (ಕರ್ನಾಟಕ ರಾಜ್ಯ ಪೊಲೀಸ್‌ ತಂಡ, ಬೆಂಗಳೂರು ) (45ನಿ.)–7, ಕೀರ್ತಿರಾಜು ಎಚ್‌ (ಚಿಕ್ಕ ಮಗಳೂರು) (45ನಿ. 31ಸೆ.)–8, ದೇವರಾಜ ವೈ.ಕೆ (ಗದಗ) (45ನಿ.49ಸೆ.)–9, ಗೋವಿಂದ ರಾಜ ಹಲಗಿ (ಕೃಷ್ಣಾಪುರ) (45ನಿ.55ಸೆ.)–10.ಮಹಿಳಾ ವಿಭಾಗ: ಅಕ್ಷತಾ ಎ (ದಾವಣ ಗೆರೆ ಡಿಎಸ್‌ಸಿ ಕ್ಲಬ್‌) (24ನಿ.01ಸೆ.)–1, ಕಮ ಲಾಕ್ಷಿ ಕೆ.ವಿ  (ಬೆಂಗಳೂರು) (26ನಿ. 05ಸೆ.)–2, ಜಯಂತಿ ಎಂ. (ಗದಗ) (26ನಿ. 23ಸೆ.)–3, ವಂದನಾ ಸಿ. ಮಠ (ವಿಜಯ ಪುರ) (27ನಿ.23ಸೆ.)–4, ಶಾಹೀದಾ ಬೇಗಂ (ಗದಗ ) ( 29ನಿ. 23ಸೆ.) –5, ರೂಪಾ ಸೂರ್ಯವಂಶಿ (ವಿಜಯಪುರ) (ಕಾಲ: 29ನಿ. 33ಸೆ.)–6, ಮೇಘನಾ ಕೆ (ಗದಗ) (30ನಿ. 36ಸೆ.)–7, ಶ್ವೇತಾ ಬೆಳಗಟ್ಟಿ (ಗದಗ) (30 ನಿ. 41 ಸೆ.)–8, ಶಶಿಕಲಾ ತಳವಾರ (ಗದಗ) (34ನಿ.12ಸೆ.)–916 ವರ್ಷದೊಳಗಿನವರ ವಿಭಾಗ (2.5 ಕಿ.ಮೀ)

ಬಾಲಕರು: ಬನ್ನಪ್ಪ ಎಂ. ಒಡೆ ಯರ್‌ (ಬೆಳಗಾವಿ) (ಕಾಲ: 7ನಿ. 42ಸೆ.)–1, ಸಮೀರ್‌ ಡಿ. (ವಿಜಯ ಪುರ) (7ನಿ.48ಸೆ.)–2, ಬಸವರಾಜ ಈರಪ್ಪ  (ಚಿಕ್ಕಮಲ್ಲಿಗವಾಡ) (7ನಿ. 86ಸೆ.)–3, ಈರಯ್ಯ ಹಿರೇಮಠ (ಗದಗ) (9ನಿ.6ಸೆ.)–4, ಕಮಲೇಶ್‌ (ಮೊರಬ) (9 ನಿ. 7 ಸೆ.)–5  ಫಕೀರೇಶ ಎಂ. (ಶ್ಯಾಗೋಟಿ) (9ನಿ.08. ಸೆ.)–6, ತಮ್ಮಣ್ಣ ಬಿ. ಮಡ್ಡಿ  (ಗದಗ) (9ನಿ. 9ಸೆ.)–7, ಮಲಿಕ್‌ ನದಾಫ್‌ (ಗದಗ) (9ನಿ.32ಸೆ.)–8, ಅರುಣ್‌ ಜತ್ತಿ (ಧಾರ ವಾಡ) (9ನಿ.48ಸೆ.)–9, ಅರುಣ್‌ ಇಮ್ರಾಪುರ (ಗದಗ)  (9ನಿ.50ಸೆ.)–10.ಬಾಲಕಿಯರು: ಸೋನಿಯಾ ಜಾಧವ್‌ (ಗದಗ) (10ನಿ.43ಸೆ.)–1, ಅಂಜಲಿ ಎಚ್‌.(ಗದಗ) (11ನಿ.39ಸೆ.)–2, ಪವಿತ್ರಾ ಕುರ್ತಕೋಟಿ (ಗದಗ) (11ನಿ.48ಸೆ.)–3, ಜ್ಯೋತಿಕಾ ಕುರಗೋಡ (ಗದಗ) (12ನಿ. 08ಸೆ.)–4, ಪೃಥ್ವಿ ಸೊನ್ನದ (ಗದಗ) (12ನಿ. 21ಸೆ.)–5, ಜಾನ್ವಿ ನವಲೇಕರ (ಗದಗ) (12ನಿ.30ಸೆ.)–6, ಸ್ವಾತಿ ರವಿ ಕುಮಾರ್ (ಗದಗ) (12ನಿ.38ಸೆ.)–7, ಪ್ರಿಯಾಂಕಾ ಪಿ.(ಗದಗ) (12ನಿ.45ಸೆ.)–8, ಭಾವನಾ ಶ್ರೀನಿವಾಸ್‌ (ಗದಗ) (12ನಿ. 49ಸೆ.)–9, ಸಂಗೀತಾ ಎಸ್‌ (ಗದಗ) (13ನಿ.15ಸೆ.)–10.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry