ನಡಾಲ್ ಮುಡಿಯೇರಿದ ದಾಖಲೆ ಕಿರೀಟ

7
ವಾವ್ರಿಂಕಾ ವಿರುದ್ಧ ಫೈನಲ್‌ನಲ್ಲಿ ಸುಲಭ ಜಯ

ನಡಾಲ್ ಮುಡಿಯೇರಿದ ದಾಖಲೆ ಕಿರೀಟ

Published:
Updated:
ನಡಾಲ್ ಮುಡಿಯೇರಿದ ದಾಖಲೆ ಕಿರೀಟ

ಪ್ಯಾರಿಸ್‌: ಗೆಲ್ಲುವ ಕುದುರೆಗೆ ಕಡಿವಾಣ ಹಾಕಲು ಎದುರಾಳಿಗೆ ಸಾಧ್ಯವಾಗಲಿಲ್ಲ. ಸ್ವಿಟ್ಜರ್‌ಲೆಂಡ್‌ನ ಸ್ಟಾನಿ ಸ್ಲಾನ್ ವಾವ್ರಿಂಕಾ ಅವರ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಸ್ಪೇನ್‌ನ ರಫೆಲ್ ನಡಾಲ್‌ ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ದಾಖಲೆಯ ಪ್ರಶಸ್ತಿ ಮುಡಿಗೇರಿಸಿಕೊಂಡರು.

ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು 6–2, 6–3, 6–1ರಿಂದ ಜಯ ಸಾಧಿಸಿದರು. ಈ ಮೂಲಕ ಟೂರ್ನಿಯಲ್ಲಿ ಹತ್ತು ಬಾರಿ ಪ್ರಶಸ್ತಿಗಳನ್ನು ಗೆದ್ದ ದಾಖಲೆ ತಮ್ಮದಾಗಿಸಿಕೊಂಡರು. 15 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆಯೂ ಅವರದಾಯಿತು.ಮೊಣಕಾಲಿನ ಗಾಯದಿಂದ 2012 ಮತ್ತು 2013ರ ಅವಧಿಯಲ್ಲಿ ಏಳು ತಿಂಗಳು ಅಂಗಳಕ್ಕೆ ಇಳಿಯಲು ಸಾಧ್ಯವಾಗದ ನಡಾಲ್‌ 2014ರಲ್ಲಿ ಕೊನೆಯದಾಗಿ ಫ್ರೆಂಚ್‌ ಓಪನ್‌ ಟೂರ್ನಿಯ ಪ್ರಶಸ್ತಿ ಗೆದ್ದಿದ್ದರು. ಈ ಬಾರಿಯ ಟೂರ್ನಿಯ ಉದ್ದಕ್ಕೂ ಒಂದೇ ಒಂದು ಸೆಟ್‌ ಕೂಡ ಸೋಲದೆ ಫೈನಲ್‌ ಪ್ರವೇಶಿಸಿದ ಅವರು ಅಂತಿಮ ಹಣಾಹಣಿಯಲ್ಲೂ ಪಾರಮ್ಯ ಮೆರೆದರು.ಶ್ವದ ಒಂದನೇ ನಂಬರ್ ಆಟಗಾರ ಆ್ಯಂಡಿ ಮರೆ ಅವರನ್ನು ಸೆಮಿಫೈನಲ್‌ನಲ್ಲಿ ಮಣಿಸಿದ್ದ 2015ರ ಚಾಂಪಿಯನ್‌ ವಾವ್ರಿಂಕಾ ಭರವಸೆಯಿಂದಲೇ ನಡಾಲ್‌ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು. ಆದರೆ ಮಣ್ಣಿನ ಅಂಕಣದ ರಾಜ ಎಂದೇ ಹೆಸರಾಗಿರುವ ಸ್ಪೇನ್‌ ಆಟಗಾರನ ಮುಂದೆ ಅವರು ಸಂಪೂರ್ಣ ಧೃತಿಗೆಟ್ಟರು.ಮೊದಲ ಸೆಟ್‌ನಿಂದಲೇ ಪಂದ್ಯದ ಮೇಲೆ ಆಧಿಪತ್ಯ ಸ್ಥಾಪಿಸಿದ ನಡಾಲ್‌ ಯಾವ ಹಂತದಲ್ಲೂ ಎದುರಾಳಿಗೆ ಅವಕಾಶ ನೀಡಲಿಲ್ಲ. ಅಂತಿಮ ಪಾಯಿಂಟ್‌ ಗಳಿಸುತ್ತಿದ್ದಂತೆ ಅಂಗಣದಲ್ಲಿ ಅಂಗಾತ ಮಲಗಿ ಸಂಭ್ರಮಿಸಿದರು. ನಂತರ ಮಾತನಾಡಿ ‘ಈ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ’ ಎಂದು ಹೇಳಿ ಭಾವುಕರಾದರು. ‘ರಾಫೆಲ್‌...ನನಗೇನೂ ಹೇಳಲಾಗುತ್ತಿಲ್ಲ. ನೀನು ಶ್ರೇಷ್ಠ ಆಟಗಾರ’ ಎಂದು ವಾವ್ರಿಂಕ ಅಭಿನಂದಿಸಿದರು.31 ವರ್ಷ ವಯಸ್ಸಿನ ನಡಾಲ್‌ ತಮ್ಮ 22ನೇ ಗ್ರ್ಯಾಂಡ್‌ಸ್ಲಾಮ್‌ ಫೈನಲ್‌ನಲ್ಲಿ ಕೇವಲ ಆರು ಗೇಮ್‌ಗಳನ್ನು ಮಾತ್ರ ಸೋತರು. ಪಂದ್ಯದ ಆರಂಭದಲ್ಲಿ ವಾವ್ರಿಂಕ ಸ್ವಲ್ಪ ಪ್ರತಿರೋಧ ಒಡ್ಡಿದರೂ ಅಪ್ರತಿಮ ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಮಿಂಚಿ ನಡಾಲ್‌ ಮೊದಲ ಸೆಟ್‌ ಗೆದ್ದರು. ಎರಡನೇ ಸೆಟ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. 6–3ರಲ್ಲಿ ಈ ಸೆಟ್ ಗೆದ್ದ ನಡಾಲ್ ಕೊನೆಯ ಸೆಟ್‌ ಅನ್ನು ಇನ್ನಷ್ಟು ನಿರಾಯಾಸವಾಗಿ ಗೆದ್ದುಕೊಂಡರು.ನಡಾಲ್‌ ಗೆದ್ದ ಪ್ರಶಸ್ತಿಗಳು

10
 ಫ್ರೆಂಚ್ ಓಪನ್‌ ಪ್ರಶಸ್ತಿಗಳು

15 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry