ಪತ್ರಕರ್ತನಿಗೆ ₹ 21ಲಕ್ಷ ದಂಡ

7

ಪತ್ರಕರ್ತನಿಗೆ ₹ 21ಲಕ್ಷ ದಂಡ

Published:
Updated:
ಪತ್ರಕರ್ತನಿಗೆ ₹ 21ಲಕ್ಷ ದಂಡ

ಜೆರುಸಲೇಂ: ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ಹೆಂಡತಿ ಸಾರಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಬರೆದ ಪತ್ರಕರ್ತರೊಬ್ಬರಿಗೆ ಇಲ್ಲಿಯ ಕೋರ್ಟ್‌ ಸುಮಾರು ₹21ಲಕ್ಷ ದಂಡ ವಿಧಿಸಿ ಆದೇಶಿಸಿದೆ.ಇಸ್ರೇಲಿ ಮುಖಂಡರೊಬ್ಬರ ಜೊತೆ ಜಗಳವಾಡಿ ಅವರನ್ನು ಕಾರಿನಿಂದ ಸಾರಾ ಹೊರತಳ್ಳಿದ್ದಾರೆ ಎಂದು ಇಗಲ್‌ ಸರ್ನಾ ಎಂಬ ಪತ್ರಕರ್ತ  ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.ಪ್ರಧಾನಿಯವರ ಬೆಂಗಾವಲು ಪಡೆಯನ್ನು ಕರೆಸಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಪೋಸ್ಟ್‌ ದೇಶದ ತುಂಬೆಲ್ಲಾ ಭಾರಿ ಚರ್ಚೆಗೆ ಗ್ರಾಸವಾಗಿತ್ತು.ಬೆಂಜಮಿನ್‌ ಅವರು ಸರ್ನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry