ಇಟಿಎಫ್‌ ಹೂಡಿಕೆ ಹೆಚ್ಚಳ

7

ಇಟಿಎಫ್‌ ಹೂಡಿಕೆ ಹೆಚ್ಚಳ

Published:
Updated:
ಇಟಿಎಫ್‌ ಹೂಡಿಕೆ ಹೆಚ್ಚಳ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ), ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರುಪೇಟೆಯ ಹೂಡಿಕೆ ನಿಧಿಗಳಲ್ಲಿ (ಇಟಿಎಫ್‌) ₹ 22,500 ಕೋಟಿಗಳನ್ನು ಹೂಡಿಕೆ ಮಾಡಲಿದೆ.ಷೇರುಪತ್ರ ಅಥವಾ ಷೇರುಪತ್ರಗಳಿಗೆ ಸಂಬಂಧಿಸಿದ ಹೂಡಿಕೆ ಯೋಜನೆಗಳಲ್ಲಿ  ಹಣ ಹೂಡಿಕೆ ಪ್ರಮಾಣ ಹೆಚ್ಚಿಸಲು ಸಂಘಟನೆಯ ಉನ್ನತ ಮಟ್ಟದ ಸಮಿತಿಯಾಗಿರುವ ಟ್ರಸ್ಟಿಗಳ ಮಂಡಳಿಯು ಅನುಮತಿ ನೀಡಿದೆ. ಹೀಗಾಗಿ, ಹೂಡಿಕೆ ಮಾಡಬಹುದಾದ ಠೇವಣಿಗಳ ಶೇ 10ರಿಂದ ಶೇ 15ರಷ್ಟನ್ನು   ‘ಇಟಿಎಫ್‌’ಗಳಲ್ಲಿ  ಹೂಡಿಕೆ ಮಾಡಲು  ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಭವಿಷ್ಯ ನಿಧಿ ಕಮಿಷನರ್‌ ವಿ. ಪಿ. ಜಾಯ್‌ ತಿಳಿಸಿದ್ದಾರೆ.ಸರ್ಕಾರಿ ಸಾಲಪತ್ರ, ರಾಜ್ಯಗಳ ಸಾಲ, ಕಾರ್ಪೊರೇಟ್‌ ಬಾಂಡ್ಸ್‌, ವಿಶೇಷ ಠೇವಣಿ ಯೋಜನೆಗಳಲ್ಲಿ ಭವಿಷ್ಯ ನಿಧಿ ಸಂಘಟನೆಯು ಹೂಡಿಕೆ ಮಾಡುತ್ತಿದೆ. ಸರ್ಕಾರಿ ಸಾಲಪತ್ರಗಳಲ್ಲಿನ ಹೂಡಿಕೆಯ ಮೇಲಿನ ಲಾಭವು ಶೇ 8ಕ್ಕಿಂತ ಕಡಿಮೆ ಇದೆ.2015ರ ಆಗಸ್ಟ್‌ನಿಂದ  ಷೇರುಪೇಟೆಯಲ್ಲಿ ಹಣ ತೊಡಗಿಸಲಾಗುತ್ತಿದೆ.  ಆರಂಭದಲ್ಲಿ ಇದು ಶೇ 5ರಷ್ಟಿತ್ತು. ನಂತರ ಶೇ 10ಕ್ಕೆ ಏರಿಕೆಯಾಗಿದೆ.ಲಾಭಾಂಶ ಹಂಚಿಕೆ ವರದಿಗೆ ಕೋರಿಕೆ

ಹೈದರಾಬಾದ್‌:
‘ಇಟಿಎಫ್‌‘ಗಳಲ್ಲಿನ ಹೂಡಿಕೆಯಿಂದ ಬರುವ ಲಾಭವನ್ನು ಭವಿಷ್ಯ ನಿಧಿ ಚಂದಾದಾರರಲ್ಲಿ ಹಂಚಿಕೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಹ್ಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌್ ಆಫ್‌ ಮ್ಯಾನೇಜ್‌ಮೆಂಟ್‌ಗೆ  (ಐಐಎಂ–ಎ) ಕೇಳಿಕೊಳ್ಳಲಾಗಿದೆ.

‘ಇಟಿಎಫ್‌ಗಳಲ್ಲಿನ ಹೂಡಿಕೆ ಯಿಂದ ಉತ್ತಮ ಲಾಭ ಬರುತ್ತಿದೆ. ₹ 272 ಕೋಟಿಗಳಷ್ಟು ಬೋನಸ್‌ ಕೂಡ ಬಂದಿದೆ. ಈ ಲಾಭವನ್ನು ನಾಲ್ಕು ಕೋಟಿಗಳಿಗಿಂತಲೂ ಹೆಚ್ಚಿನ ಠೇವಣಿ ದಾರರಲ್ಲಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವರದಿ ಸಲ್ಲಿಸಲು ಐಐಎಂ–ಎಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry