ಮೊಬೈಲ್‌ ಸಂಸ್ಥೆಗಳಿಗೆ ನಿರಾಶೆ

7

ಮೊಬೈಲ್‌ ಸಂಸ್ಥೆಗಳಿಗೆ ನಿರಾಶೆ

Published:
Updated:
ಮೊಬೈಲ್‌ ಸಂಸ್ಥೆಗಳಿಗೆ ನಿರಾಶೆ

ನವದೆಹಲಿ: ದೂರಸಂಪರ್ಕ ಸೇವೆಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕೆಂಬ ಬೇಡಿಕೆ ಈಡೇರದಿರುವುದಕ್ಕೆ ಮೊಬೈಲ್‌ ಸೇವಾ ಸಂಸ್ಥೆಗಳು ತಮ್ಮ ತೀವ್ರ ನಿರಾಶೆ ವ್ಯಕ್ತಪಡಿಸಿವೆ.ಶೇ 18ರಷ್ಟು ತೆರಿಗೆ ಕಡಿಮೆ ಮಾಡಬೇಕು ಎಂದು ಭಾರತೀಯ ಮೊಬೈಲ್‌ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ಸರ್ಕಾರವನ್ನು ಒತ್ತಾಯಿಸಿದ್ದವು.

ಅವಶ್ಯಕ ಸೇವೆಗಳಿಗೆ ವಿಧಿಸಿರುವ ಶೇ 5ರಷ್ಟು ತೆರಿಗೆಯನ್ನು ಮೊಬೈಲ್‌ ಸೇವೆಗೂ ಅನ್ವಯಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದವು. 

ಹೊಸ ದರಗಳು ಜಾರಿಗೆ ಬರುತ್ತಿದ್ದಂತೆ ಗ್ರಾಹಕರ ಪಾಲಿಗೆ ದೂರಸಂಪರ್ಕ ಸೇವೆಗಳು ದುಬಾರಿಯಾಗಿ ಪರಿಣಮಿಸಲಿವೆ ಎಂದೂ ಅಹವಾಲು ಸಲ್ಲಿಸಿದ್ದವು.

ಸದ್ಯಕ್ಕೆ ಮೊಬೈಲ್‌ ಬಳಕೆದಾರರು ಮೊಬೈಲ್‌ ಬಿಲ್‌ಗಳ ಮೇಲೆ ಶೇ 15ರಷ್ಟು ಸೇವಾ ತೆರಿಗೆ ಮತ್ತು ಸೆಸ್‌ ಪಾವತಿಸುತ್ತಿದ್ದಾರೆ.‘ಈಗ ನಿಗದಿ ಮಾಡಿರುವ ದರಗಳು ಬಹುತೇಕ ಅಂತಿಮ. ಯಾರೊ ಕೆಲವರು ಕೆಲ ವಿಷಯಗಳನ್ನು ಪ್ರಸ್ತಾಪಿಸಿದ ಕಾರಣಕ್ಕೆ ಅವುಗಳನ್ನೆಲ್ಲ ಈಡೇರಿಸಲಿಕ್ಕಾಗದು’ ಎಂದು ಅರುಣ್‌ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

ಜಾಬ್‌ ವರ್ಕ್‌ ದರಕ್ಕೆ ಶ್ಲಾಘನೆ:   ಜವಳಿ, ಚರ್ಮ  ಮತ್ತು ಚಿನ್ನಾಭರಣ  ವಲಯಗಳಲ್ಲಿ ದುಡಿಯುವ ಕೆಲಸಗಾರರು ಮನೆಗೆ ತೆಗೆದುಕೊಂಡು ಹೋಗುವ ಕೆಲಸಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸುವ ನಿರ್ಧಾರವನ್ನು ಈ ಉದ್ಯಮ ವಲಯ ಸ್ವಾಗತಿಸಿದೆ.ಪ್ರಿಂಟರ್ಸ್‌ಗಳ ಮೇಲಿನ ತೆರಿಗೆ ದರ ಶೇ 18ಕ್ಕೆ ಇಳಿಸಿರುವುದನ್ನು ಐ.ಟಿ ಹಾರ್ಡ್‌ವೇರ್‌ ಉದ್ದಿಮೆ ಸ್ವಾಗತಿಸಿದೆ. ಕಂಪ್ಯೂಟರ್‌ ಮಾನಿಟರ್‌ಗಳ ಮೇಲಿನ ಶೇ 28ರಷ್ಟು ತೆರಿಗೆಯು ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry