ಸಂಕಷ್ಟದಲ್ಲಿ ವಾಹನ ಸವಾರರು

7
ವಿಜಯನಗರದ ಕೆಳಸೇತುವೆಯಲ್ಲಿ ಆಯಿಲ್ ಸೋರಿಕೆ

ಸಂಕಷ್ಟದಲ್ಲಿ ವಾಹನ ಸವಾರರು

Published:
Updated:
ಸಂಕಷ್ಟದಲ್ಲಿ ವಾಹನ ಸವಾರರು

ಬೆಂಗಳೂರು: ವಿಜಯನಗರದ ಟೋಲ್‌ಗೇಟ್ ಕೆಳಸೇತುವೆಯ ರಸ್ತೆಯುದ್ದಕ್ಕೂ ಆಯಿಲ್ ಸೋರಿಕೆಯಾಗಿದ್ದು, ಇದರಿಂದ ಬೈಕ್ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ.

ಭಾನುವಾರ ಬೆಳಿಗ್ಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರೊಬ್ಬರು ಬಿದ್ದಿದ್ದು, ತುಟಿ ಹಾಗೂ ಗದ್ದಕ್ಕೆ ಗಾಯವಾಗಿದೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ಆಯಿಲ್ ಸೋರಿಕೆಯಾಗಿರುವುದರಿಂದ ಸಾಕಷ್ಟು ಬೈಕ್ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಸ್ಥಳದಲ್ಲಿ ಸ್ಥಳೀಯರು ಮರಳನ್ನು ಹಾಕಿ ತಾತ್ಕಾಲಿಕವಾಗಿ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದಲ್ಲಿ ಮತ್ತಷ್ಟು ವಾಹನ ಸವಾರರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ವಾಹನ ಸವಾರ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry