ನಗರಕ್ಕೆ ಇಂದು ಉಪರಾಷ್ಟ್ರಪತಿ ವಾಹನ ನಿಲುಗಡೆ ನಿಷೇಧ

7

ನಗರಕ್ಕೆ ಇಂದು ಉಪರಾಷ್ಟ್ರಪತಿ ವಾಹನ ನಿಲುಗಡೆ ನಿಷೇಧ

Published:
Updated:
ನಗರಕ್ಕೆ ಇಂದು ಉಪರಾಷ್ಟ್ರಪತಿ ವಾಹನ ನಿಲುಗಡೆ ನಿಷೇಧ

ಬೆಂಗಳೂರು: ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಗರದಲ್ಲಿ ಸೋಮವಾರ  ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಯನ್ನು ಬೆಳಿಗ್ಗೆ 6ರಿಂದ ಸಂಜೆ 5ರ ವರೆಗೆ ನಿಷೇಧಿಸಲಾಗಿದೆ.

ಉಪರಾಷ್ಟ್ರಪತಿ ಸಂಚರಿಸುವ ವೇಳೆ ಸಾರ್ವಜನಿಕರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು: ಹಳೇ ವಿಮಾನ ನಿಲ್ದಾಣ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ ರಸ್ತೆ,  ಡಿಕನ್ಸನ್ ರಸ್ತೆ, ಕಬ್ಬನ್ ರಸ್ತೆ,  ರಾಜಭವನ ರಸ್ತೆ, ಅರಮನೆ ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ, ಮಿಲ್ಲರ್ಸ್ ರಸ್ತೆ, ಚಂದ್ರಿಕಾ ಜಂಕ್ಷನ್,  ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ,  ಟಿ.ಚೌಡಯ್ಯ ರಸ್ತೆ,   ಕುಮಾರಕೃಪಾ ರಸ್ತೆ, ಬಳ್ಳಾರಿ ರಸ್ತೆ.

ವಾಹನ ನಿಲುಗಡೆಗೆ ಪರ್ಯಾಯ ಸ್ಥಳಗಳು: ಎಂ.ವಿ.ಜಯರಾಮ್ ರಸ್ತೆ, ತಿಮ್ಮಯ್ಯ ರಸ್ತೆ, ಟ್ಯಾಂಕ್ ಬಂಡ್ ರಸ್ತೆ,  ಜಸ್ಮಾ ದೇವಿ ಭವನ ರಸ್ತೆ, ಮಹಾವೀರ್ ಜೈನ್ ದೇವಸ್ಥಾನ ರಸ್ತೆ,  ಅರಮನೆ ಮೈದಾನದ ಮಾವಿನ ಕಾಯಿ ಮಂಡಿ ಆವರಣ. ಸೆಂಟ್ರಲ್ ಕಾಲೇಜು ಮೈದಾನ,  ವೈ.ರಾಮಚಂದ್ರ ರಸ್ತೆ, ಸ್ವಾತಂತ್ರ್ಯ ಉದ್ಯಾನ, ಬೆಂಗಳೂರು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ, ಶೇಷಾದ್ರಿ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry