2050ರ ಹೊತ್ತಿಗೆ ಶುದ್ಧ ನೀರಿಗೆ ಭಾರಿ ಕೊರತೆ: ವಿಶ್ವಸಂಸ್ಥೆ ಎಚ್ಚರಿಕೆ

7

2050ರ ಹೊತ್ತಿಗೆ ಶುದ್ಧ ನೀರಿಗೆ ಭಾರಿ ಕೊರತೆ: ವಿಶ್ವಸಂಸ್ಥೆ ಎಚ್ಚರಿಕೆ

Published:
Updated:
2050ರ ಹೊತ್ತಿಗೆ ಶುದ್ಧ ನೀರಿಗೆ ಭಾರಿ ಕೊರತೆ: ವಿಶ್ವಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ: 2050ರ ವೇಳೆಗೆ ಜಗತ್ತಿನ ಶುದ್ಧ ಕುಡಿಯುವ ನೀರಿನ ಬೇಡಿಕೆಯು ಶೇ 40ರಷ್ಟು ಹೆಚ್ಚಲಿದೆ. ಅದೇ ವೇಳೆ ಜಗತ್ತಿನ ಜನಸಂಖ್ಯೆಯ ಕಾಲುಭಾಗದಷ್ಟು ಜನರು ಶುದ್ಧ ಕುಡಿಯುವ ನೀರಿನ ತೀವ್ರತರವಾದ ಕೊರತೆ ಅನುಭವಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೆನಿಯೊ ಗುಟೆರಸ್ ಎಚ್ಚರಿಸಿದ್ದಾರೆ.ಶಾಂತಿ ಕದಡಬಲ್ಲದು

ನೀರು, ಶಾಂತಿ ಹಾಗೂ ಭದ್ರತೆ– ಈ ಮೂರರ ನಡುವೆ ಬಿಡಿಸಲಾರದ ಬಂಧವಿದೆ. ಜಲ ಸಂಪನ್ಮೂಲದ ಸೂಕ್ತ ನಿರ್ವಹಣೆ ಇಲ್ಲದಿದ್ದರೆ, ವಿವಿಧ ಸಮುದಾಯಗಳು ಹಾಗೂ ದೇಶ–ದೇಶಗಳ ನಡುವೆ ತೀವ್ರ ಬಿಕ್ಕಟ್ಟು ಉಂಟಾಗುತ್ತದೆ ಎಂದು ಗುಟೆರಸ್ ಹೇಳಿದ್ದಾರೆ.ಜಗತ್ತಿನಲ್ಲಿ ಪ್ರಸ್ತುತ ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಜನರ ಸಂಖ್ಯೆ 80 ಕೋಟಿನೈರ್ಮಲ್ಯ ಸೌಲಭ್ಯಗಳಿಂದ ವಂಚಿತ ಜನರ ಸಂಖ್ಯೆ 250 ಕೋಟಿಎಲ್ಲೆಲ್ಲೂ ನೀರಿಗೆ ಹಾಹಾಕಾರ

* 1947ರಿಂದ ಬೊಲಿವಿಯಾ ದೇಶವು ತನ್ನ ನೆರೆ ದೇಶಗಳ ಜೊತೆ 37 ಬಾರಿ ಸಂಘರ್ಷ ಎದುರಿಸಿದೆ. ಇದು ನೀರಿನ ಕೊರತೆ ತಂದಿಟ್ಟಿರುವ ಬಿಕ್ಕಟ್ಟು.

* ಸೋಮಾಲಿಯಾ, ನೈಜೀರಿಯಾದಂತಹ ದೇಶಗಳಲ್ಲಿ ನೀರಿನ ಕೊರತೆಯು ತೀವ್ರ ಆಹಾರ ಕೊರತೆ ಹಾಗೂ ಕ್ಷಾಮ ತಂದೊಡ್ಡಿದೆ. ಸಾವಿರಾರು ಜನರನ್ನು ಅನಾರೋಗ್ಯಕ್ಕೆ ನೂಕಿದೆ.* ದಕ್ಷಿಣ ಏಷ್ಯಾದ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ, ಚೀನಾ, ಪಾಕಿಸ್ತಾನ ಮತ್ತು ಭಾರತದ ಸುಮಾರು 100 ಕೋಟಿ ಜನರು ಮೂರು ಮುಖ್ಯವಾದ ನದಿಗಳ ನೀರನ್ನೇ ಅವಲಂಬಿಸಿದ್ದಾರೆ ಎಂದು ವಿಶ್ವಸಂಸ್ಥೆಗೆ ಬ್ರಿಟನ್‌ ರಾಯಭಾರಿಯಾಗಿರುವ ಮ್ಯಾಥ್ಯೂ ಕ್ರಾಫ್ಟ್‌  ಹೇಳಿದ್ದಾರೆ. * ನೀರಿನ ತೀವ್ರ ಬೇಡಿಕೆ ಹಾಗೂ ಹವಾಮಾನ ವೈಪರೀತ್ಯದ ಹೊರತಾಗಿಯೂ ಈ ದೇಶಗಳ ನಡುವಿನ ಸಂಬಂಧ ಸುಧಾರಿಸಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry