ಮುಂಬೈ – ಅಹಮದಾಬಾದ್‌ ನಡುವೆ ಐಷಾರಾಮಿ ವ್ಯವಸ್ಥೆಯ ಬುಲೆಟ್‌ ರೈಲು

7

ಮುಂಬೈ – ಅಹಮದಾಬಾದ್‌ ನಡುವೆ ಐಷಾರಾಮಿ ವ್ಯವಸ್ಥೆಯ ಬುಲೆಟ್‌ ರೈಲು

Published:
Updated:
ಮುಂಬೈ – ಅಹಮದಾಬಾದ್‌ ನಡುವೆ ಐಷಾರಾಮಿ ವ್ಯವಸ್ಥೆಯ ಬುಲೆಟ್‌ ರೈಲು

ನವದೆಹಲಿ: ಮುಂಬೈ –ಅಹಮದಾಬಾದ್‌ ಮಧ್ಯೆ ಸಂಚರಿಸಲು ಬುಲೆಟ್‌ ರೈಲು ಸಿದ್ಧಗೊಂಡಿದ್ದು, ರೈಲಿಗೆ ಐಷಾರಾಮಿ ಟಚ್‌ಅಪ್‌ ನೀಡಲಾಗಿದೆ.ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಪಾಶ್ಚಿಮಾತ್ಯ ಮಾದರಿಯ ಶೌಚಾಲಯ, ಬಿಸಿನೀರು, ಐಷಾರಾಮಿ ಸೀಟು ಮಾತ್ರವಲ್ಲದೇ ಮೇಕ್‌–ಅಪ್‌ಗಾಗಿ ಹೊಸಬಗೆಯ ಕನ್ನಡಿಯನ್ನೂ ಅಳವಡಿಸಲಾಗಿದೆ.ದೇಶದ ಮೊಟ್ಟಮೊದಲ ಬುಲೆಟ್ ರೈಲು ಎಂದು ಕರೆಸಿಕೊಂಡಿರುವ ಇ5 ಶಿಂಕನಸೇನ್‌ ಸಿರೀಸ್‌ ರೈಲು ಇದಾಗಿದೆ. ಈ ರೈಲಿನಲ್ಲಿ 731 ಸೀಟುಗಳಿವೆ. ಮಕ್ಕಳಿಗಾಗಿಯೇ ವಿಶೇಷ ರೀತಿಯ ವ್ಯವಸ್ಥೆಯೂ ಇದೆ. ಶೌಚಾಲಯ ಸೀಟು, ಡೈಪರ್‌ ಬದಲಿಸುವ ವ್ಯವಸ್ಥೆ ಜೊತೆಗೆ ಮಕ್ಕಳಿಗಾಗಿಯೇ ಕಡಿಮೆ ಎತ್ತರ ಇರುವ ಸಿಂಕ್‌ ವ್ಯವಸ್ಥೆಯನ್ನೂ  ಮಾಡಲಾಗಿದೆ.ಎದೆಹಾಲು ಕುಡಿಸುವ ಅಮ್ಮಂದಿರಿಗೆ ವಿಶೇಷ ಕೋಣೆಯ ವ್ಯವಸ್ಥೆಯೂ ಇದರಲ್ಲಿದೆ. ಈ ರೈಲಿಗೆ ಐದುಸಾವಿರ ಕೋಟಿ ರೂಪಾಯಿ ವೆಚ್ಚ ತಗುಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry