ಜಿಎಸ್‌ಟಿ: ಸ್ಕೂಲ್‌ ಬ್ಯಾಗ್‌, ಅಗರಬತ್ತಿ ಅಗ್ಗ

7

ಜಿಎಸ್‌ಟಿ: ಸ್ಕೂಲ್‌ ಬ್ಯಾಗ್‌, ಅಗರಬತ್ತಿ ಅಗ್ಗ

Published:
Updated:
ಜಿಎಸ್‌ಟಿ: ಸ್ಕೂಲ್‌ ಬ್ಯಾಗ್‌, ಅಗರಬತ್ತಿ ಅಗ್ಗ

ನವದೆಹಲಿ: ಉಪ್ಪಿನಕಾಯಿ, ಸಾಸಿವೆ ಸಾಸ್‌, ಸ್ಕೂಲ್‌ ಬ್ಯಾಗ್‌, ₹ 100 ವರೆಗಿನ ಸಿನಿಮಾ ಟಿಕೆಟ್‌ ಸೇರಿದಂತೆ 66 ಸರಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಗಳನ್ನು (ಜಿಎಸ್‌ಟಿ) ತಗ್ಗಿಸಲಾಗಿದೆ.ಭಾನುವಾರ ನಡೆದ ಜಿಎಸ್‌ಟಿ ಮಂಡಳಿ 16ನೆ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಣ್ಣ ಉದ್ದಿಮೆದಾರರಿಗೆ ಪರಿಹಾರ ಒದಗಿಸಲಾಗಿದೆ.‘ಉದ್ಯಮ ವಲಯದಿಂದ ಪಡೆದ ಮಾಹಿತಿ ಆಧರಿಸಿ ಈ ತೆರಿಗೆ ದರಗಳನ್ನು ಇಳಿಸಲಾಗಿದೆ. ಏಕರೂಪತೆ ಕಾಯ್ದುಕೊಳ್ಳಲು ಮತ್ತು ಸರಕುಗಳ ಬಳಕೆ ಪ್ರಮಾಣ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.ಅಡುಗೆ ಮನೆ ಪರಿಕರಗಳಾದ ಸಾಸಿವೆ ಸಾಸ್‌, ಉಪ್ಪಿನ ಕಾಯಿ, ಮೊರಬ್ಬಾ ಮತ್ತು ಚಮಚಗಳ ಮೇಲಿನ ತೆರಿಗೆ ದರಗಳನ್ನು  ಇಳಿಸಲಾಗಿದೆ.

ಇನ್ಸುಲಿನ್‌ ಮತ್ತು ಅಗರಬತ್ತಿಗಳ ಮೇಲಿನ ತೆರಿಗೆ ಶೇ 5ಕ್ಕೆ ಇಳಿಸಲಾಗಿದೆ. ಸ್ಕೂಲ್‌ ಬ್ಯಾಗ್‌ (ಶೇ 28ರ ಬದಲಿಗೆ) ಶೇ 18ರಷ್ಟು ತೆರಿಗೆಗೆ ಒಳಪಡಲಿದೆ.ಶೇ 12ಕ್ಕಿಂತ ಶೇ5ರಷ್ಟಕ್ಕೆ ತೆರಿಗೆ ಇಳಿಸಿರುವುದರಿಂದ ಗೋಡಂಬಿ ಅಗ್ಗವಾಗಲಿದೆ.ಸಿನಿಮಾ ತೆರಿಗೆ ಕಡಿಮೆ

ಸಿನಿಮಾಗಳ ಮೇಲಿನ ಮನರಂಜನಾ ತೆರಿಗೆ ಹೊರೆ ತಗ್ಗಿಸಲಾಗಿದೆ. ಸದ್ಯಕ್ಕೆ  ರಾಜ್ಯಗಳು ಮನರಂಜನಾ ತೆರಿಗೆ ವಿಧಿಸುತ್ತಿದ್ದು, ತೆರಿಗೆ ದರಗಳು ಶೇ 28 ರಿಂದ ಶೇ 110ರವರೆಗೆ ಇದೆ.  ದೇಶದಾದ್ಯಂತ ಸರಾಸರಿ ಶೇ 30ರಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry