ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದಲ್ಲಿ ‘ಮಾವು ಉತ್ಸವ’

Last Updated 11 ಜೂನ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು:  ಈ ಬಾರಿಯೂ ರಂಗಶಂಕರದಲ್ಲಿ ಭಾನುವಾರ ‘ಮಾವು ಉತ್ಸವ’ ಆಯೋಜಿಸಲಾಗಿತ್ತು. ಉತ್ಸವಕ್ಕೆ ಬಂದವರು ಬಗೆ ಬಗೆಯ ಮಾವಿನ ಹಣ್ಣುಗಳನ್ನು ತಿಂದು ಇತರರಿಗೂ ಹಂಚಿ ಖುಷಿ ಪಟ್ಟರು.

ಬಹುತೇಕರು ಬೇರೆ ಬೇರೆ ತಳಿಗಳ ಒಂದು ಕೆ.ಜಿ. ಮಾವಿನ ಹಣ್ಣುಗಳನ್ನು ತಂದಿದ್ದರು. ಅವುಗಳನ್ನು ನೀರು ತುಂಬಿಟ್ಟಿದ್ದ ಎರಡು ದೊಡ್ಡ   ಪಾತ್ರೆಗಳಲ್ಲಿ ರಾಶಿ ಹಾಕಲಾಗಿತ್ತು. ಬಳಿಕ ನೆರೆದಿದ್ದವರು ತಮಗಿಷ್ಟವಾದ ಹಣ್ಣನ್ನು ಆಯ್ದುಕೊಂಡು ತಿನ್ನುತ್ತಾ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಜೊತೆ ಹರಟೆ ಹೊಡೆದರು.

ಮಾವಿನಿಂದ ತಯಾರಿಸಿದ ವಿಶೇಷ ಖಾದ್ಯಗಳು ರಂಗಶಂಕರದ ಕ್ಯಾಂಟೀನ್‌ನಲ್ಲಿ  ಸಿದ್ಧಗೊಂಡಿದ್ದವು.

ಜಯನಗರದ ನಿವಾಸಿ ಮುಕ್ತಾ, ‘ಐದು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇತರರೊಂದಿಗೆ ಸೇರಿ ಮಾವಿನ ಹಣ್ಣುಗಳನ್ನು ಹಂಚಿಕೊಂಡು ತಿನ್ನುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೆ. ಆ ಕ್ಷಣ ಈಗ ಈಡೇರಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT