ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಸಾವಿರ ರನ್‌ ಸಿಡಿಸಿ ಸಚಿನ್‌ ದಾಖಲೆ ಮುರಿದ ಶಿಖರ್‌ ಧವನ್‌

Last Updated 12 ಜೂನ್ 2017, 5:29 IST
ಅಕ್ಷರ ಗಾತ್ರ

ಲಂಡನ್‌: ಟಿಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್‌ ಧವನ್‌ 2017 ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಧವನ್‌ ಆಡಿರುವ 16 ಇನಿಂಗ್ಸ್‌ನಲ್ಲಿ ವೇಗದ 1000 ರನ್‌ ಗಳಿಸಿ ಈ ಸಾಧನೆ ಮಾಡಿದ್ದಾರೆ.

ಭಾರತದ ತಂಡದ ಹಿರಿಯ ಆಟಗಾರ ಸಚಿನ್‌ ತೆಂಡೂಲ್ಕರ್‌ 18 ಇನಿಂಗ್ಸ್‌ನಲ್ಲಿ 1000 ರನ್‌ ಗಳಿಸಿದ ದಾಖಲೆ ಹೊಂದಿದ್ದರು. ಜತೆಗೆ ಸೌರವ್‌ ಗಂಗೂಲಿ ಹಾಗೂ 20 ಇನಿಂಗ್ಸ್‌ನಲ್ಲಿ 1000 ರನ್‌ ಗಳಿಸಿದ್ದರು.

ಭಾನುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 44.3 ಓವರ್‌ಗಳಲ್ಲಿ 191 ರನ್‌ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಮುಟ್ಟಲು ವಿರಾಟ್ ಕೊಹ್ಲಿ ಬಳಗವು ತಾಳ್ಮೆಯಿಂದ ಆಡಿ 38 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 193 ರನ್‌ ಗಳಿಸಿತು.

ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಶಿಖರ್ ಧವನ್ (78; 83ಎ, 12ಬೌಂ, 1ಸಿ) ಮತ್ತು ನಾಯಕ ವಿರಾಟ್ ಕೊಹ್ಲಿ (ಔಟಾಗದೆ 76; 101ಎ, 7ಬೌಂ, 1ಸಿ) ಅರ್ಧಶತಕ ಗಳಿಸಿದರು. ಈ ಮೂಲಕ ಧವನ್‌ 19ನೇ ಅರ್ಧಶತಕ ಹಾಗೂ ವಿರಾಟ್‌ ಕೊಹ್ಲಿ 41 ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT