ಚುರುಕುಗೊಂಡ ಮುಂಗಾರು

7

ಚುರುಕುಗೊಂಡ ಮುಂಗಾರು

Published:
Updated:
ಚುರುಕುಗೊಂಡ ಮುಂಗಾರು

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿಯಿಡಿ ಉತ್ತಮ ಮಳೆಯಾಗುವ ಮೂಲಕ ಮುಂಗಾರು ಚುರುಕುಗೊಂಡಿದೆ. ವಿರಾಜಪೇಟೆ ಪಟ್ಟಣ, ದೇವಗೇರಿ, ಕಾಕೋಟುಪರಂಬು, ಮೈತಾಡಿ, ಕದನೂರು, ಕೆದಮುಳ್ಳೂರು, ಹೆಗ್ಗಳ, ರಾಮನಗರ, ತೋರ, ಪೆರುಂಬಾಡಿ, ಆರ್ಜಿ, ಬೋಟೋಳಿ ಸೇರಿದಂತೆ ಸುತ್ತಮುತ್ತಲಿ ಗ್ರಾಮಗಳಲ್ಲಿ ಶನಿವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ಭಾನುವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆ ಸುರಿಯಿತು.

ಸಾಧಾರಣ ಮಳೆ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪೊನ್ನಂಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಶ್ರೀಮಂಗಲ,ಹುದಿಕೇರಿ, ತಿತಿಮತಿ ಮೊದಲಾದ ಭಾಗಗಳಿಗೆ  ಭಾನುವಾರ  ಆಗಾಗ್ಗೆ ಮಳೆ ಬಿದ್ದಿತು.  ಬೆಳಿಗ್ಗೆಯಿಂದಲೂ ಆಗಸದಲ್ಲಿ ದಟ್ಟ ಮೋಡ ಕವಿದಿತ್ತು. ಮಧ್ಯಾಹ್ನದ ವರೆಗೆ ಸಾಧಾರಣವಾಗಿದ್ದ ಮಳೆ ಸಂಜೆ ವೇಳೆಗೆ ತುಸು ಚುರುಕಾಯಿತು. ತೊರೆ ತೋಡುಗಳಲ್ಲಿ  ಸ್ವಲ್ಪ ಮಟ್ಟಿಗೆ ನೀರು ಹರಿಯತೊಡಗಿದೆ. ಸಣ್ಣ ಪುಟ್ಟ ಹಳ್ಳಗಳಲ್ಲಿ ನೀರು  ತುಂಬಿದೆ. ಜಿಟಿಜಿಟಿ ಮಳೆ

ನಾಪೋಕ್ಲು:ಮುಂಗಾರು ಆರಂಭ ಗೊಂಡಿದ್ದು, ಭಾನುವಾರ ಜಿಟಿಜಿಟಿ ಮಳೆ ಗ್ರಾಮಸ್ಥರಿಗೆ ಹಿತವಾದ ಅನುಭವ ನೀಡಿತು. ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಮಳೆ ಬಿಡುವು ನೀಡಿತ್ತಾದರೂ ಬಳಿಕ  ನಿರಂತರವಾಗಿ ಸುರಿಯಿತು, ಮೋಡ ಕವಿದ ವಾತಾವರಣ ಹಾಗೂ ಶೀತಗಾಳಿಯಿಂದ ಕಾಫಿ ತೋಟದ ಕೆಲಸಗಳಿಗೆ ಕ್ರಮೇಣ ಬಿಡುವು ದೊರೆಯಲಿದ್ದು  ಕಾರ್ಮಿಕರು ಭತ್ತದ ಗದ್ದೆಯ ಕೆಲಸಗಳಿಗೆ ಅಣಿಯಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry