ಶ್ರಿಲಂಕಾ ವಿರುದ್ದ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಪಾಕ್‌

7
ಚಾಂಪಿಯನ್ಸ್‌ ಟ್ರೋಫಿ

ಶ್ರಿಲಂಕಾ ವಿರುದ್ದ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಪಾಕ್‌

Published:
Updated:
ಶ್ರಿಲಂಕಾ ವಿರುದ್ದ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಪಾಕ್‌

ಕಾರ್ಡಿಫ್‌: ಆರಂಭದ ಪಂದ್ಯದಲ್ಲಿ ಸೋಲು ಕಂಡರೂ ನಂತರ ಬಲಿಷ್ಠ ಎದುರಾಳಿಗಳನ್ನು ಮಣಿಸಿದ ತಂಡಗಳ ನಡುವಿನ ಹಣಾಹಣಿಗೆ ಸೋಫಿಯಾ ಗಾರ್ಡನ್ಸ್‌ ಸೋಮವಾರ ಸಾಕ್ಷಿಯಾಗಲಿದೆ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿದ್ದು ಗೆದ್ದವರು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ. ಹೀಗಾಗಿ ‘ಬಿ’ ಗುಂಪಿನ ಈ ಪಂದ್ಯವನ್ನು ‘ಕ್ವಾರ್ಟರ್‌ ಫೈನಲ್’ ಎಂದೇ ಬಿಂಬಿಸಲಾಗಿದೆ.

ಶ್ರೀಲಂಕಾ ವಿರುದ್ಧ ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್‌ಗಳಿಂದ ಮಣಿಸಿತ್ತು. ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ 124 ರನ್‌ಗಳಿಂದ ಸೋಲುಂಡಿದ್ದ ಪಾಕಿಸ್ತಾನ ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.

ರ‍್ಯಾಂಕಿಂಗ್‌ನಲ್ಲಿ ತಮಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳನ್ನು ಮಣಿಸಿದ್ದರಿಂದ ಉಭಯ ತಂಡಗಳ ಭರವಸೆ ಹೆಚ್ಚಿದೆ. ಈಗ ಈ ತಂಡಗಳೇ ಮುಖಾಮುಖಿಯಾಗಲಿವೆ. ಆದ್ದರಿಂದ ಜಯ ಯಾರು ಕಸಿದುಕೊಳ್ಳುವರು ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಶ್ರೀಲಂಕಾ 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದೆ.(ನಿರೋಶನ್‌ ಬ್ಯಾಟಿಂಗ್‌ 04, ಧನುಶ್ಕಾ ಗುಣತಿಲಕ ಬ್ಯಾಟಿಂಗ್‌ 00)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry