ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಗಿರಿ: ತಲೆ ಎತ್ತಲಿದೆ ಹಸಿರು ಬಂಕ್!

Last Updated 12 ಜೂನ್ 2017, 10:01 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಮೊದಲ ಹಸಿರು ಇಂಧನ (ಬಯೋ ಡೀಸೆಲ್ ಬಂಕ್) ಮಾರಾಟ ಕೇಂದ್ರ ಇಲ್ಲಿನ ವಿದ್ಯಾಗಿರಿಯಲ್ಲಿ ಅಧಿಕೃತವಾಗಿ ಜೂನ್ 18ರಿಂದ ಕಾರ್ಯಾರಂಭ ಮಾಡಲಿದೆ. ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಈಗಾಗಲೇ ಬಂಕ್‌ ಸಿದ್ಧಗೊಂಡಿದೆ. ಶೇ 100ರಷ್ಟು ಬಯೋ ಡೀಸೆಲ್ ಮಾರಾಟ ಮಾಡುವ ಕೇಂದ್ರಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ತಾಂತ್ರಿಕ ನೆರವಿಗೆ ಬಸವೇಶ್ವರ ಎಂಜಿನಿ ಯರಿಂಗ್ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗ ಒತ್ತಾಸೆಯಾಗಿ ನಿಂತಿದೆ.

ಪ್ರಾಯೋಗಿಕ ಆರಂಭ: ಹಸಿರು ಇಂಧನ ಮಾರಾಟ ಕೈಂಕರ್ಯಕ್ಕೆ ವಿದ್ಯಾಗಿರಿಯ ನಿವೃತ್ತ ಕೃಷಿ ವಿಜ್ಞಾನಿ ಡಾ.ಎಸ್.ಎಸ್. ಅಂಗಡಿ ಹಾಗೂ ನಿವೃತ್ತ ಎಂಜಿನಿಯರ್ ಶಿವಾನಂದ ಶೆಟ್ಟರ್ ಕೈಜೋಡಿಸಿದ್ದಾರೆ. ಮೊದಲಿಗೆ ಎಂಜಿನಿಯರಿಂಗ್ ಕಾಲೇ ಜಿನ ಬಯೋಟೆಕ್ನಾಲಜಿ ವಿಭಾಗದಿಂದ ಇಂಧನ ಖರೀದಿಸಿ ತಲಾ ಎರಡು ಲೀಟರ್ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡಿದ್ದಾರೆ.

ನಾಲ್ಕು ತಿಂಗಳು ಕಾಲ ನಡೆದ ಈ ಪ್ರಾಯೋಗಿಕ ಕಾರ್ಯದಲ್ಲಿ ದೊರೆತ ಯಶಸ್ಸು ಹಾಗೂ ಹಸಿರು ಇಂಧನಕ್ಕೆ ಗ್ರಾಹಕರಿಂದ ದೊರೆತ ಸ್ಪಂದನೆಯಿಂದ ಪ್ರೇರಿತರಾಗಿ ಈಗ ಅದಕ್ಕೆ ಉದ್ಯಮದ ರೂಪು ನೀಡಲು ಮುಂದಾಗಿದ್ದಾರೆ. ಹೆದ್ದಾರಿ ಪಕ್ಕದ ಸ್ವಂತ ನಿವೇಶನದಲ್ಲಿ ₹ 4 ಲಕ್ಷ ವೆಚ್ಚದಲ್ಲಿ ಬಂಕ್ ನಿರ್ಮಾಣ ಮಾಡಿದ್ದಾರೆ.

ದಿನಕ್ಕೆ 20 ಸಾವಿರ ಲೀಟರ್ ಲಭ್ಯ:
‘ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಕೋಲ್ಕತ್ತಾ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಸಂತನು ದುಬೆ ಇಲ್ಲಿನ ಅಗ್ರೋ ಟೆಕ್‌ ಪಾರ್ಕ್‌ನಲ್ಲಿ ಬಯೋ ಡೀಸೆಲ್ ಉತ್ಪಾದನಾ ಘಟಕ ಆರಂಭಿಸಿ ದ್ದಾರೆ. ಆ ಘಟಕದಲ್ಲಿ ಪ್ರತಿ ಪಾಳಿಗೆ (ಶಿಫ್ಟ್) 10 ಸಾವಿರದಂತೆ ದಿನಕ್ಕೆ 20 ಸಾವಿರ ಲೀಟರ್ ಡೀಸೆಲ್‌ ಉತ್ಪಾದಿಸಲಾಗುತ್ತದೆ. ಸಂತನು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಮ್ಮ ಬಂಕ್‌ಗೆ ಅವರೇ ಇಂಧನ ಪೂರೈಸಲಿ ದ್ದಾರೆ ಎಂದು ಡಾ.ಎಸ್.ಎಸ್.ಅಂಗಡಿ ತಿಳಿಸಿದರು.

ಹೆಚ್ಚಿನ ಕಾರ್ಯಕ್ಷಮತೆ: ‘ಬಯೋ ಡೀಸೆಲ್‌ ಬಳಕೆ ಮಾಡಿದರೆ ಪೆಟ್ರೋಲ್ ಕಾರಿನಲ್ಲಿ ಓಡಾಟ ಮಾಡಿದ ಅನುಭವವಾಗುತ್ತದೆ. ಹೊಗೆ ಬರುವುದಿಲ್ಲ. ಕಾರ್ಬನ್ ಮೊನಾಕ್ಸೈಡ್, ಕಾರ್ಬನ್ ಡಯಾಕ್ಸೈಡ್, ಸಲ್ಫರ್ ಡಯಾಕ್ಸೈಡ್ ಬಿಡುಗಡೆಯಾಗಿ ಪರಿಸರ ಮಾಲಿನ್ಯ ಆಗುವುದಿಲ್ಲ. ಎಂಜಿನ್ ಕಾರ್ಯಕ್ಷಮತೆ ಹೆಚ್ಚಳವಾಗುತ್ತದೆ. ಇದರಿಂದ ದುರಸ್ತಿ ಖರ್ಚು ಉಳಿತಾಯವಾಗುತ್ತದೆ’ ಎಂಬುದು ಅಂಗಡಿ ಅವರ ಅಭಿಮತ.

ಜತ್ರೋಫಾ, ಸೀಮಾರೂಬಾ, ಹೊಂಗೆ, ಬೇವು, ಹತ್ತಿ, ವೇಸ್ಟ್ ಆಯಿಲ್, ಡೇರಿಯ ತ್ಯಾಜ್ಯಗಳು, ಆಲ್ಕೈ ಬಳಕೆ ಮಾಡಿ ಬಯೋ ಡೀಸೆಲ್ ತಯಾ ರಿಸಲಾಗುತ್ತದೆ. ಸಾಮಾನ್ಯ ಡೀಸೆಲ್‌ನ ದರಕ್ಕೆ (ಪ್ರತಿ ಲೀಟರ್‌ಗೆ ₹ 60) ಬಯೋ ಡೀಸೆಲ್ ಮಾರಾಟ ಮಾಡಲಾಗುತ್ತದೆ.

ಉತ್ತಮ ಮೈಲೇಜ್: ‘ನಾನು ಸ್ವಂತಕ್ಕೆ ಬಳಕೆ ಮಾಡುವ ಸ್ಕಾರ್ಪಿಯೊ ವಾಹ ನಕ್ಕೂ ಬಯೋಡೀಸೆಲ್ ಬಳಕೆ ಮಾಡು ತ್ತಿದ್ದೇನೆ. ಸಾಮಾನ್ಯ ಡೀಸೆಲ್‌ ಬಳಕೆ ಯಿಂದ ಪ್ರತಿ ಲೀಟರ್‌ಗೆ (ಹವಾ ನಿಯಂತ್ತಿತ ವ್ಯವಸ್ಥೆ) 10 ಕಿ.ಮೀ ಮೈಲೇಜ್ ನೀಡಿದರೆ ಬಯೋ ಡೀಸೆಲ್ ಬಳಕೆಯಿಂದ 14 ಕಿ.ಮೀ ದೂರ ಕ್ರಮಿ ಸಿದೆ ಎಂದು ಹೇಳುವ ಡಾ.ಎಸ್.ಎಸ್. ಅಂಗಡಿ, ಕೃಷಿ ವಿಜ್ಞಾನಿಯಾಗಿ ಒಮನ್, ಶಾರ್ಜಾದಲ್ಲೂ ಕೆಲಸ ಮಾಡಿದ್ದಾರೆ.

200 ಬಂಕ್ ಸ್ಥಾಪನೆ ಉದ್ದೇಶ: ‘ಸದ್ಯ ಪೂರ್ಣ ಪ್ರಮಾಣದಲ್ಲಿ ಬಯೋ ಡೀಸೆಲ್ ಮಾರಾಟ ಮಾಡುವ ಬಂಕ್‌ ಗಳು ರಾಜ್ಯದಲ್ಲಿ ಕಡಿಮೆ. ಸಾಮಾನ್ಯ ಡೀಸೆಲ್ ಜೊತೆ ಈ ಹಸಿರು ಇಂಧನ ವನ್ನು ಬಳಸಿ ಬಳಕೆ ಮಾಡಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲೂ ಬಳಸಲಾಗುತ್ತಿದೆ. ಗ್ರಾಹಕರ ಬೇಡಿಕೆ ಗಮನಿಸಿ ರಾಜ್ಯಾದ್ಯಂತ 200 ಬಂಕ್‌ ಗಳನ್ನು ಸ್ಥಾಪಿಸುವ ಉದ್ದೇಶವಿದೆ. ಅದಕ್ಕಾಗಿಯೇ ಶೆಟ್ಟರ್ ಅಂಡ್ ಅಂಗಡಿ ಅಸೋಸಿಯೇಟ್ಸ್ ಎಂಬ ಏಜೆನ್ಸಿ ಆರಂಭಿಸಿದ್ದೇವೆ’ ಎನ್ನುತ್ತಾರೆ.

ಜಿಲ್ಲೆಯ ಹೊನ್ನಾಕಟ್ಟಿ ಕ್ರಾಸ್, ಹಳ್ಳೂರು, ಮುಧೋಳ, ಬೀಳಗಿ, ತೇರ ದಾಳ, ಜಮಖಂಡಿ, ಬೆಳಗಾವಿ ಜಿಲ್ಲೆ ಅಥಣಿ ಹಾಗೂ ಹುಬ್ಬಳ್ಳಿಯಲ್ಲೂ ಮುಂದಿನ ದಿನಗಳಲ್ಲಿ ಬಂಕ್ ಆರಂಭಿ ಸುವ ಯೋಜನೆ ಹೊಂದಲಾಗಿದೆ ಎಂದು ಅಂಗಡಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT