ಶ್ವಾನ ದಳ ತರಬೇತಿಗೆ ಒಂದು ತಿಂಗಳ ಶ್ವಾನ ಮರಿಗಳ ಸೇರ್ಪಡೆ

7

ಶ್ವಾನ ದಳ ತರಬೇತಿಗೆ ಒಂದು ತಿಂಗಳ ಶ್ವಾನ ಮರಿಗಳ ಸೇರ್ಪಡೆ

Published:
Updated:
ಶ್ವಾನ ದಳ ತರಬೇತಿಗೆ ಒಂದು ತಿಂಗಳ ಶ್ವಾನ ಮರಿಗಳ ಸೇರ್ಪಡೆ

ತೈವಾನ್‌ (ಚೀನಾ): ನಗರದ ಕ್ಸಿನ್ಬಿ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ತನಿಖೆಗೆ ನೆರವಾಗುವ ಉದ್ದೇಶದಿಂದ ಶ್ವಾನ ದಳ ತರಬೇತಿಗೆ ಒಂದು ತಿಂಗಳ ವಯಸ್ಸಿನ ನಾಲ್ಕು ಶ್ವಾನ ಮರಿಗಳನ್ನು ಸೇರ್ಪಡೆ ಮಾಡಲಾಗಿದೆ.

ಹೀಗೆ ಸೇರ್ಪಡೆಗೊಂಡಿರುವ ಶ್ವಾನಗಳಿಗೆ ಕೆಲವೇ ತಿಂಗಳಗಳಲ್ಲಿ ಡ್ರಗ್ಸ್‌ ಜಾಲದ ಪತ್ತೆ, ಕಾಣೆಯಾದ ಪ್ರಕರಣ, ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷ್ಯಗಳ ಹುಡುಕಾಟಕ್ಕೆ ಬೇಕಾದ ತರಬೇತಿಯನ್ನು ನೀಡಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿದ್ದಾಗಿ ಗ್ಲೋಬಲ್ ಟಿವಿ ನೆಟ್‌ವರ್ಕ್ಸ್‌ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದೆ.

ಬೆಳವಣಿಗೆ ಹಂತದಲ್ಲಿಯೇ ಸೂಕ್ಷ್ಮ ಬುದ್ಧಿಯ ಮರಿಗಳನ್ನು ಆಯ್ಕೆ ಮಾಡಿ, ನಿರಂತರವಾಗಿ ಸೂಕ್ತ ತರಬೇತಿಯೊಂದಿಗೆ ಶೋಧ ಕಾರ್ಯಕ್ಕೆ ಬಳಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry