ಅಭ್ಯರ್ಥಿ ಆಯ್ಕೆ ಸಮಾಲೋಚನೆಗೆ ಮೂವರು ಸಚಿವರ ಸಮಿತಿ ರಚಿಸಿದ ಅಮಿತ್‌ ಷಾ

7

ಅಭ್ಯರ್ಥಿ ಆಯ್ಕೆ ಸಮಾಲೋಚನೆಗೆ ಮೂವರು ಸಚಿವರ ಸಮಿತಿ ರಚಿಸಿದ ಅಮಿತ್‌ ಷಾ

Published:
Updated:
ಅಭ್ಯರ್ಥಿ ಆಯ್ಕೆ ಸಮಾಲೋಚನೆಗೆ ಮೂವರು ಸಚಿವರ ಸಮಿತಿ ರಚಿಸಿದ ಅಮಿತ್‌ ಷಾ

ನವದೆಹಲಿ: ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮೂವರು ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು ಅವರು ಸಮಿತಿಯ ಸದಸ್ಯರಾಗಿದ್ದಾರೆ. ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿ ಇತರ ರಾಜಕೀಯ ಪಕ್ಷಗಳು ಮತ್ತು ಮಿತ್ರಪಕ್ಷಗಳ ಜತೆ ಸಮಾಲೋಚನೆ ನಡೆಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ.

ಚುನಾವಣಾ ಪೂರ್ವತಯಾರಿಗಾಗಿ ಸೋಮವಾರ ನಿಗದಿಯಾಗಿದ್ದ ಅರುಣಾಚಲಪ್ರದೇಶ ಭೇಟಿಯನ್ನು ಷಾ ರದ್ದುಗೊಳಿಸಿದ್ದಾರೆ. ಜುಲೈ 15 ಮತ್ತು 16ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ರಾಷ್ಟ್ರಪತಿ ಚುನಾವಣೆ ಹಿನ್ನೆಯಲ್ಲಿ ಮುಂದೂಡಕೆಯಾಗುವ ಸಾಧ್ಯತೆ ಇದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಬುಧವಾರ ಸಭೆ ನಡೆಸಲು ಪ್ರತಿಪಕ್ಷಗಳು ಭಾನುವಾರ ನಿರ್ಧರಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry