ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಅಂಚೆ

Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ವೆಂಕಟೇಶ ಜಿ.ಎಚ್. ಅವರ ‘ಸಾಲು ಮಂಟಪದ ಅನ್ನಪೂರ್ಣೆಯರು’ (ಮೇ.30) –ಹಸಿದವರಿಗೆ ರೊಟ್ಟಿ ಅನ್ನ ನೀಡಿ ಹಸಿವು ತಣಿಸುವ ನಡೆದಾಡುವ ಭೋಜನಾಲಯಗಳೆಂದೇ ಪ್ರಸಿದ್ಧಿ ಪಡೆದವರ ನಗೆಯ ಹಿಂದಿನ ಕರುಣ ಕಥೆ ಮತ್ತು ಜೀವನದ ವ್ಯಥೆ ಬಿಂಬಿಸುವ ಮನಕರಗುವ ಸುಂದರ ಲೇಖನ.

ಕಳೆದ 30 ವರ್ಷಗಳಿಂದ, ಬದಾಮಿ ಬನಶಂಕರಿ ದೇವಸ್ಥಾನ, ಪಟ್ಟದಕಲ್ಲು, ಮಹಾಕೂಟದ ದೇವಸ್ಥಾನಗಳ ಪರಿಸರದಲ್ಲಿ ಕಾಣಸಿಗುವ ಇವರ ನಿತ್ಯ ಜೀವನದ ಕರುಣ ಕಥೆಯನ್ನು ಹೇಳಿತು ಈ ಲೇಖನ. ತಮ್ಮ ಜೀವನದಲ್ಲಿ  ಏನೇ ಸಂಕಟ ತಾಪತ್ರಯಗಳಿದ್ದರೂ ಪ್ರತಿ ದಿನ ಅಡುಗೆ ಕಟ್ಟಿಕೊಂಡು ಗ್ರಾಹಕರ ಹಸಿವು ತಣಿಸುವ ಅವರ ಪುಣ್ಯದ ಕೆಲಸ ಮತ್ತು ಅವರ ಈ ಪ್ರಯತ್ನ ಶ್ಲಾಘನೀಯ. ಇಂಥ ಚಿಂತನಪರವಾದ ಲೇಖನ ನೀಡಿದ ಲೇಖಕರಿಗೆ ಧನ್ಯವಾದ.

–ಕೆ.ಪಿ.ರಾಮಗುಂಡಿ ಬೈಲಹೊಂಗಲ

**
ಈ ಲೇಖನ ಓದಿ ನನ್ನ ಬಾಯೆಲ್ಲಾ ನೀರು ನೀರಾಯಿತು. ಎಂಥ ಸ್ವಾದಿಷ್ಟ, ಎಂಥ ರುಚಿ, ಆಹಾ! ಕಷ್ಟಪಟ್ಟು ಅಡುಗೆ ಮಾಡಿಕೊಂಡು ಬಂದು, ದೂರದ ಊರಿಂದ ಬರುವ ಪ್ರವಾಸಿಗರಿಗೆ ಸಾಲುಮಂಟಪದ ನೆರಳಲ್ಲಿ ಅತ್ಯಲ್ಪ ಹಣಕ್ಕೆ ಖುಷಿಖುಷಿಯಿಂದ ಅನ್ನ ದಾಸೋಹ ಮಾಡುವ ಇವರು ಖಂಡಿತವಾಗಿಯೂ ಅನ್ನಪೂರ್ಣೆಯರು. ದೇವರ ಕೃಪೆ ಇವರ ಮೇಲೆ ಸದಾ ಇರಲಿ.
-ಟಿ. ಅನುರಾಧಾ ದಾವಣಗರೆ

**

ಹೃದ್ಯವಾದ ಈ ಲೇಖನ ಓದಿದ ಬಳಿಕ ಅನ್ನಪೂರ್ಣೆಯರ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡುವ ಮನಸ್ಸಾಗಿದೆ.
–ಇಸ್ಮಾಯಿಲ್‌ ಈಚನೂರು

**

ಬದಾಮಿಯ ಸಾಲುಮಂಟಪದ ರೊಟ್ಟಿಯ ಊಟದ ಚಿತ್ರಣವನ್ನು ಚೆಂದದ ಲೇಖನದ ಮೂಲಕ ನೀಡಿದ ಕರ್ನಾಟಕ ದರ್ಶನ ಪುರವಣಿಗೆಗೆ ಅಭಿನಂದನೆಗಳು. ಲೇಖನ ನವಿರಾಗಿದೆ. ರೊಟ್ಟಿಯ ನೆನಪು ತರುತ್ತಾ ಮತ್ತೆ ಅಲ್ಲಿಗೆ ಹೋಗುವಂತೆ ಪ್ರೇರೇಪಿಸುತ್ತಿದೆ.
–ಎಂ.ಎ. ವೆಂಕಟೇಶ್ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT