ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಹ ದಂಡಿಸಿದರೇ ನಿದ್ದೆ ಬರೋದು’

Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಕಡಿಮೆ ಸಮಯದಲ್ಲೇ ಭಾರಿ ಪ್ರಸಿದ್ಧ ಪಡೆದವರು. ‘ಕಾಯ್‌ ಪೊ ಚೆ’, ‘ಡಿಟೆಕ್ಟಿವ್‌ ಬ್ಯೊಕೆಂಶ್‌ ಭಕ್ಷ್‌’, ‘ಎಂ.ಎಸ್‌ ಧೋನಿ:ದಿ ಅನ್‌ಟೋಲ್ಡ್‌ ಸ್ಟೋರಿ’ ಈ ಚಿತ್ರಗಳಲ್ಲಿ ಮನೋಜ್ಞ ಅಭಿನಯದ  ಮೂಲಕ ಸುಶಾಂತ್‌ ಭಾರಿ ಜನಪ್ರಿಯತೆ ಪಡೆದಿದ್ದಾರೆ.

ಕಿರುತೆರೆಯಲ್ಲೂ ‘ಪವಿತ್ರ ರಿಷ್ತಾ’ ಧಾರಾವಾಹಿಯ ಜವಾಬ್ದಾರಿಯುತ ಹಾಗೂ ಆದರ್ಶ ಕುಟುಂಬದ ಯಜಮಾನನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.
ಮುಗ್ಧ ಮುಖದಲ್ಲೊಂದು ಸದಾ ನಗು ಹೊದ್ದುಕೊಂಡೇ ಇರುವ ಸುಶಾಂತ್‌ ಸಿಂಗ್‌ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡುತ್ತಾರೆ. ದೇಹದ ಫಿಟ್‌ನೆಸ್‌ಗಾಗಿ ಹೆಚ್ಚು ಗಮನ ಹರಿಸುತ್ತಾರೆ.

ಜಿಮ್‌ ಅಂದರೆ ತುಂಬ ಇಷ್ಟಪಡುವ ಸುಶಾಂತ್‌ ದೇಹವು ಫಿಟ್‌ ಹಾಗೂ ಕ್ರಿಯಾಶೀಲವಾಗಿರಲು ವಾರಕ್ಕೆ 4 ದಿನ ಜಿಮ್‌ಗೆ ಹೋಗುತ್ತಾರೆ.
ಸುಶಾಂತ್‌ ಅವರದು ಬಲಿಷ್ಠ ದೇಹವಲ್ಲ, ಆದರೆ ನಟನೆಗಾಗಿ ಫಿಟ್‌ ಆಗಿ ಇರಲು ಅವರು ಜಿಮ್‌ ಹೋಗುತ್ತಾರೆ.

ಜಿಮ್‌ನಲ್ಲಿ ದೇಹ ದಂಡಿಸುವುದರಿಂದ ದೇಹದಲ್ಲಿ ಶೇಖರವಾಗುವ ಹೆಚ್ಚಿನ ಕೊಬ್ಬು ಕರಗುತ್ತದೆ. ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇದು ನರಗಳನ್ನು ಬಲಿಷ್ಠಗೊಳಿಸಿ, ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ, ಸುಖವಾಗಿ ನಿದ್ರೆ ಬರುತ್ತದೆ ಎಂಬುದು ಸುಶಾಂತ್‌ ಅಭಿಪ್ರಾಯ.

ಸುಶಾಂತ್‌ ಯಾವಾಗಲೂ ಮಾರ್ಷಲ್‌ ಆರ್ಟ್ಸ್ ಅಭ್ಯಾಸ ಮಾಡುತ್ತಿರುತ್ತಾರೆ.  ಇದು ತೋಳು ಹಾಗೂ ಕಾಲಿನ ಶಕ್ತಿಯನ್ನು ಹೆಚ್ಚಿಸುತ್ತದೆ.  ದೇಹದ ಹೆಚ್ಚುವರಿ ಕೊಬ್ಬು ನಿವಾರಣೆಗೆ ಸಹಾಯಕ ಎನ್ನುತ್ತಾರೆ.

ಇವರು ಕುದುರೆ ಸವಾರಿಯನ್ನೂ ಮಾಡುತ್ತಾರೆ. ಇದು ದೇಹದ ಶಕ್ತಿ ಹಾಗೂ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ. ಸುಶಾಂತ್‌ನ ಮತ್ತೊಂದು ಹವ್ಯಾಸ ನೃತ್ಯ. ‘ಝಲಕ್‌ ದಿಖಲಾ ಜಾ’ ಕಾರ್ಯಕ್ರಮದಲ್ಲಿ ಇವರ ನೃತ್ಯದ ವೈಖರಿಯನ್ನು ಎಲ್ಲರೂ  ನೋಡಿರಬಹುದು. ಇವರು ಈಗ ಬ್ಯಾಲೆ ನೃತ್ಯವನ್ನು ಕಲಿಯುತ್ತಿದ್ದಾರೆ.

ಶಿಸ್ತುಬದ್ಧ ಆಹಾರ ಕ್ರಮ ಸುಶಾಂತ್‌ ಸಿಂಗ್‌ ಆಯ್ಕೆ. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಇವರು ಸ್ವಲ್ಪ ದುಂಡಗಿದ್ದರು. ಮೊದಲ ಸಿನಿಮಾಕ್ಕೆ ಅವಕಾಶ ಸಿಕ್ಕ ನಂತರ ದೇಹಾಕಾರದ ಬಗ್ಗೆ ಗಮನ ವಹಿಸಿದರು.  ಅವರ ಫೇವರಿಟ್‌ ಆಲೂ ಹಾಗೂ ಗೋಬಿ ಪರೋಟದಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ಇವರು ಬೇಯಿಸಿದ ತರಕಾರಿ, ಪ್ರೋಟೀನ್‌ ಜ್ಯೂಸ್‌ಗಳು ಹಾಗೂ ಹಣ್ಣುಗಳನ್ನು ಹೆಚ್ಚು ಸೇವಿಸುತ್ತಾರೆ.

ಒಂದೇ ಒಂದು ಕ್ಯಾಲೊರಿ ಹೆಚ್ಚಾದರೂ ಫಿಟ್‌ನೆಸ್‌ ನಿಯಮಕ್ಕೆ ಧಕ್ಕೆ ಆಗಬಹುದು ಎಂಬ ಆತಂಕ ಸುಶಾಂತ್‌ರದು. ಹೀಗಾಗಿ ಹೊಸ ಹೊಸ ರುvಚಿ ಸವಿಯುವ ಬಯಕೆಯನ್ನು ತಮ್ಮಲ್ಲೇ ಬಚ್ಚಿಟ್ಟುಕೊಂಡಿದ್ದಾರೆ.

ಸುಶಾಂತ್‌ ಸಿಂಗ್‌ ಜಂಕ್‌ಫುಡ್‌ಗಳಿಂದ ದೂರ. ಅತಿಯಾಗಿ ಎಣ್ಣೆ ಬಳಸುವ ಆಹಾರ ಹಾಗೂ ಸಿಹಿ ತಿಂಡಿ ಗಳನ್ನು ಇವರು ಮುಟ್ಟುವುದೂ  ಇಲ್ಲ ವಂತೆ. 
ವಿಶೇಷ ಸಂದರ್ಭಗಳಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡುತ್ತಾರೆ.

**

ಹುಟ್ಟಿದ್ದು: 21 ಜನವರಿ 1986
ಎತ್ತರ: 5.10 ಅಡಿ
ತೂಕ: 78 ಕೆ.ಜಿ.
ಸುತ್ತಳತೆ: 42 –32–15
ಇಷ್ಟದ ಆಹಾರ: ಅನ್ನ, ದಾಲ್‌, ಚಿಕನ್‌ ಖಾದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT