ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 237ರನ್‌ ಗುರಿ ನೀಡಿದ ಶ್ರೀಲಂಕಾ

7

ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 237ರನ್‌ ಗುರಿ ನೀಡಿದ ಶ್ರೀಲಂಕಾ

Published:
Updated:
ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 237ರನ್‌ ಗುರಿ ನೀಡಿದ ಶ್ರೀಲಂಕಾ

ಕಾರ್ಡಿಫ್‌: ಚಾಂಪಿಯನ್ಸ್‌ ಟ್ರೋಫಿ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ 49.2 ಓವರ್‌ಗಳಲ್ಲಿ 236ರನ್‌ ಗಳಿಸಿ ಆಲೌಟ್‌ ಆಗಿದೆ.

ಶ್ರೀಲಂಕಾ ಪರ ಆರಂಭಿಕ ಆಟಗಾರ ನಿರೋಶಾನ್‌ ಡಿಕ್ವೆಲ್ಲಾ(73) ಹಾಗೂ ನಾಯಕ ಆಂಜೆಲೋ ಮ್ಯಾಥ್ಯೂಸ್‌(39) ಹೊರತುಪಡಿಸಿ ಉಳಿದ ಆಟಗಾರರಿಂದ ಉತ್ತಮ ಆಟ ಹೊರಹೊಮ್ಮಲಿಲ್ಲ.

ಬಿಗುವಿನ ಬೌಲಿಂಗ್‌ ದಾಳಿ ಸಂಘಟಿಸಿದ ಪಾಕಿಸ್ತಾನ ವೇಗಿಗಳಾದ ಜುನೈದ್‌ ಖಾನ್‌ 3 ಹಾಗೂ ಮೊಹಮ್ಮದ್‌ ಆಮೀರ್‌ 2 ವಿಕೆಟ್‌ ಉರುಳಿಸಿ ತಮ್ಮ ತಂಡ ಮೇಲುಗೈ ಸಾಧಿಸಲು ಸಹಕಾರಿಯಾದರು.

ಮುಂದಿನ ಹಂತ ಪ್ರವೇಶಿಸಲು ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದ್ದು, ಗೆದ್ದ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry