‘ಹಸೀನಾ...’ ಪೋಸ್ಟರ್‌ ಬಿಡುಗಡೆ

7

‘ಹಸೀನಾ...’ ಪೋಸ್ಟರ್‌ ಬಿಡುಗಡೆ

Published:
Updated:
‘ಹಸೀನಾ...’ ಪೋಸ್ಟರ್‌ ಬಿಡುಗಡೆ

ಮುಖಕ್ಕೆ ಕಪ್ಪು ಬಟ್ಟೆ ಸುತ್ತಿಕೊಂಡು ಕೋಪದಿಂದ ದಿಟ್ಟಿಸಿ ನೋಡುತ್ತಿರುವ ಶ್ರದ್ಧಾ ಕಪೂರ್‌ನ  ‘ಹಸೀನಾ: ದಿ ಕ್ವೀನ್‌ ಆಫ್‌ ಮುಂಬೈ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್‌ ಕುರಿತಾದ ಈ ಚಿತ್ರದಲ್ಲಿ ಹಸೀನಾ ಪಾತ್ರವನ್ನು ಶ್ರದ್ಧಾ ನಿರ್ವಹಿಸುತ್ತಿದ್ದಾರೆ. ಶ್ರದ್ಧಾ ಸಹೋದರ ಸಿದ್ಧಾಂತ್‌ ಕಪೂರ್‌, ದಾವೂದ್‌ ಇಬ್ರಾಹಿಂ ಆಗಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್‌ 18ರಂದು ಬಿಡುಗಡೆಯಾಗಲಿದೆ.

ಬುರ್ಕಾ ಧರಿಸಿ ಕಣ್ಣಿಗೆ ದಟ್ಟವಾಗಿ ಕಾಡಿಗೆ ಹಚ್ಚಿರುವ ಶ್ರದ್ಧಾ ಕಪೂರ್‌  ಕಣ್ಣಲ್ಲಿ  ಭಯಂಕರವಾದ ಕೋಪವಿದೆ. ಆಕೆ ಸುತ್ತಮುತ್ತ ಮಹಿಳೆಯರ ಗುಂಪು ಇದೆ. ‘88 ಪ್ರಕರಣಗಳು ಈಕೆಯ ವಿರುದ್ಧ ದಾಖಲಾಗಿವೆ. ಆದರೆ ಕೋರ್ಟ್‌ಗೆ ಹಾಜರಾಗಿರುವುದು ಒಂದೇ ಬಾರಿ’ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ. ಇದು ಹಸೀನಾ  ಎಷ್ಟು ಪ್ರಭಾವಶಾಲಿ ಮಹಿಳೆಯಾಗಿದ್ದಳು ಎಂಬುದನ್ನು ಸೂಚಿಸುತ್ತದೆ.

ತನ್ನ ಸಹೋದರನ ಜೊತೆ  ಇದೇ ಮೊದಲ ಬಾರಿಗೆ ಶ್ರದ್ಧಾ ನಟಿಸುತ್ತಿದ್ದಾರೆ. ‘ನಾನು ನಟನೆ ಮಾಡುವಾಗ ಆತ ನನ್ನ ಸಹೋದರ ಎಂಬುದನ್ನು ಮರೆಯುತ್ತೇನೆ’ ಎಂದು ಇತ್ತೀಚೆಗೆ ಪುಣೆಯಲ್ಲಿ  ಶೂಟಿಂಗ್‌ ವೇಳೆ ಹೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಹಸೀನಾ ಗಂಡ ಇಬ್ರಾಹಿಂ ಪಾತ್ರದಲ್ಲಿ ನಟಿಸಿದ್ದ ಅಂಕುರ್‌ ಭಾಟಿಯಾ ಜೊತೆಗಿನ ರೊಮ್ಯಾನ್ಸ್‌ ದೃಶ್ಯಗಳನ್ನು ಶ್ರದ್ಧಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry