ಕ್ವಾರ್ಟರ್‌ಗೆ ಪೇಸ್‌–ಲಿಪ್ಸಿಕಿ ಜೋಡಿ

7

ಕ್ವಾರ್ಟರ್‌ಗೆ ಪೇಸ್‌–ಲಿಪ್ಸಿಕಿ ಜೋಡಿ

Published:
Updated:
ಕ್ವಾರ್ಟರ್‌ಗೆ ಪೇಸ್‌–ಲಿಪ್ಸಿಕಿ ಜೋಡಿ

ಹೆರ್ಟೊಗೆನ್‌ಬೋಷ್‌, ನೆದರ್ಲೆಂಡ್ಸ್‌ : ಭಾರತದ ಲಿಯಾಂಡರ್ ಪೇಸ್ ಹಾಗೂ ಅಮೆರಿಕದ ಸ್ಕಾಟ್‌ ಲಿಪ್ಸಿಕಿ ಜೋಡಿ ಇಲ್ಲಿ ನಡೆದ ಎಟಿಪಿ ರಿಕೊ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

ಶ್ರೇಯಾಂಕರಹಿತ ಇಂಡೊ–ಅಮೆ ರಿಕನ್ ಜೋಡಿ ಪ್ರೀ ಕ್ವಾರ್ಟರ್‌ನಲ್ಲಿ 7–5, 6–4ರಲ್ಲಿ ನೇರ ಸೆಟ್‌ಗಳಿಂದ ಬೆಲ್ಜಿಯಂನ ಸ್ಟೀವ್ ಡಾರ್ಸಿಯಾ ಲುಕ್ಸೆಮ್‌ಬರ್ಗ್‌ನ ಗಿಲ್ಲೆಸ್‌ ಮುಲ್ಲರ್‌ ಅವರನ್ನು ಮಣಿಸಿತು.

ಒಂದು ಗಂಟೆ 11 ನಿಮಿಷದ ಹಣಾಹಣಿಯಲ್ಲಿ ಪೇಸ್ ಜೋಡಿ ಸುಲಭ ಗೆಲುವು ತಮ್ಮದಾಗಿಸಿ ಕೊಂಡಿತು. ಸ್ಟೀವ್ ಹಾಗೂ ಗಿಲ್ಲೆಸ್‌  ತಾವೆಸಗಿದ ತಪ್ಪುಗಳಿಂದ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry