‘ಭಾರತೀಯರು, ಅನಿವಾಸಿಯರ ಸಬಲೀಕರಣ’

7

‘ಭಾರತೀಯರು, ಅನಿವಾಸಿಯರ ಸಬಲೀಕರಣ’

Published:
Updated:
‘ಭಾರತೀಯರು, ಅನಿವಾಸಿಯರ ಸಬಲೀಕರಣ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಮಂತ್ರದಂತೆ ಭಾರತೀಯರನ್ನು ಮಾತ್ರವಲ್ಲದೇ, ವಿದೇಶದಲ್ಲಿ ಇರುವ ಭಾರತೀಯರ ಸಬಲೀಕರಣ ವನ್ನೂ ಮಾಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಮೂರು ವರ್ಷ ಪೂರೈಸಿದ  ಅಂಗವಾಗಿ  ಪಕ್ಷದ ದೆಹಲಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,

‘ಮೋದಿ ಸರ್ಕಾರವು ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಮಾಜದಲ್ಲಿರುವ ಮಹಿಳೆ, ಯುವಕರು, ಬಡವರ ಏಳಿಗೆಗಾಗಿ ಹಲವು ಯೋಜನೆಗಳನ್ನು ಹಮ್ಮಿ

ಕೊಂಡಿದೆ’ ಎಂದರು.

‘ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆಸಿದ್ದ 1.25 ಲಕ್ಷ ಮಂದಿಯನ್ನು ಭಾರತ ಸರ್ಕಾರವು ಸುರಕ್ಷಿತವಾಗಿ ಪಾರು ಮಾಡಿದೆ. ಯೆಮೆನ್‌ ರಾಷ್ಟ್ರದಿಂದಲೇ 80 ಸಾವಿರ ಮಂದಿಯನ್ನು ರಕ್ಷಿಸಿ ಕರೆತರಲಾಗಿದೆ. ಇವರಲ್ಲಿ 1947 ವಿದೇಶಿಯರು ಇದ್ದರು’ ಎಂದು ಸುಷ್ಮಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry