ಸೈನಾ ನೆಹ್ವಾಲ್ ಕಣಕ್ಕೆ

7
ಅಮೆರಿಕ ಓಪನ್ ಬ್ಯಾಡ್ಮಿಂಟನ್‌

ಸೈನಾ ನೆಹ್ವಾಲ್ ಕಣಕ್ಕೆ

Published:
Updated:
ಸೈನಾ ನೆಹ್ವಾಲ್ ಕಣಕ್ಕೆ

ನವದೆಹಲಿ:  ಭಾರತದ ಸೈನಾ ನೆಹ್ವಾಲ್‌ ಮುಂದಿನ ತಿಂಗಳು ನಡೆಯುವ ಅಮೆರಿಕ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಸಭೆಯ ಬಳಿಕ ಬ್ಯಾಡ್ಮಿಂಟನ್ ಸಂಸ್ಥೆ ಮುಂಬರುವ ಮೂರು ಅಂತರರಾಷ್ಟ್ರೀಯ ಟೂರ್ನಿಗಳಿಗೆ ತಂಡವನ್ನು ಬಿಡುಗಡೆ ಮಾಡಿದೆ. 23 ಪ್ರಶಸ್ತಿಗಳನ್ನು ಗೆದ್ದಿರುವ ಸೈನಾ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಆಯ್ಕೆ ಸಮಿತಿ ಅಮೆರಿಕ್ ಓಪನ್ ಸೇರಿದಂತೆ  ಚೀನಾ ತೈಪೆ ಗ್ರ್ಯಾನ್ ಪ್ರಿ ಗೋಲ್ಡ್ (ಜೂನ್ 27ರಿಂದ ಜುಲೈ 2), ಕೆನಡಾ ಓಪನ್‌ (ಜುಲೈ 11ರಿಂದ 16), ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗಳಿಗೂ (ಜುಲೈ 22ರಿಂದ 30) ತಂಡ ಪ್ರಕಟಿಸಿದೆ.

ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್‌ನಲ್ಲಿ 27 ವರ್ಷದ ಸೈನಾ ಅವರೊಂದಿಗೆ ರಿತುಪರ್ಣಾ ದಾಸ್‌, ರುತ್ವಿಕಾ ಶಿವಾನಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ, ಎಚ್‌.ಎಸ್. ಪ್ರಣಯ್‌, ಪಿ. ಕಶ್ಯಪ್‌ ಹಾಗೂ ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ, ಸುಮೀತ್ ರೆಡ್ಡಿ, ಸಾತ್ವಿಕಾ ಸೈರಾಜ್‌ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಕಣದಲ್ಲಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಪೂರ್ವಿಶಾ ರಾಮ್‌, ಮೇಘನಾ ಜಕ್ಕಮಪುಡಿ, ಸಿಕ್ಕಿ ರೆಡ್ಡಿ, ಅಶ್ವಿನಿ ಪೊನ್ನಪ್ಪ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ, ಪ್ರಣವ್ ಜೆರಿ ಚೋಪ್ರಾ, ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕಾ ಸೈರಾಜ್‌, ರಾಂಕಿರೆಡ್ಡಿ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry