ಜೆಇಇ: ಕುಶಾಲ್‌ಗೆ 14ನೇ ರ‍್ಯಾಂಕ್

7

ಜೆಇಇ: ಕುಶಾಲ್‌ಗೆ 14ನೇ ರ‍್ಯಾಂಕ್

Published:
Updated:
ಜೆಇಇ: ಕುಶಾಲ್‌ಗೆ 14ನೇ ರ‍್ಯಾಂಕ್

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕಿನ ಕೊಂತಿಕಲ್ಲ ಗ್ರಾಮದ ಕುಶಾಲ್ ರವಿ ಪಾಟೀಲ ಐಐಟಿ ಜೆಇಇ (ಅಡ್ವಾನ್ಸ್ಡ್‌) ಪರೀಕ್ಷೆಯಲ್ಲಿ 14ನೇ ಸ್ಥಾನ ಪಡೆದಿದ್ದಾರೆ.

ಕುಶಾಲ್‌ ತಂದೆ ರವಿ ಪಾಟೀಲ ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ನವದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಣ್ಣ ವಿಶಾಲ್, ಬಿಟ್ಸ್ ಪಿಲಾನಿಯಲ್ಲಿ ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ಓದುತ್ತಿದ್ದಾರೆ.

‘ಉತ್ತಮ ಫಲಿತಾಂಶ ಖುಷಿ ತಂದಿದೆ. ಮುಂಬೈ ಐಐಟಿಯಲ್ಲಿ ಅಧ್ಯಯನ ಮುಂದುವರಿಸಿ ಪ್ರೋಗ್ರಾಮರ್ ಆಗುವ ಕನಸು ನನ್ನದಾಗಿದೆ’ ಎಂದು  ಕುಶಾಲ್   ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry