ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ ಯುವಕನಿಗೆ ಮರಣದಂಡನೆ

7

ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ ಯುವಕನಿಗೆ ಮರಣದಂಡನೆ

Published:
Updated:
ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ ಯುವಕನಿಗೆ ಮರಣದಂಡನೆ

ಪಾಕಿಸ್ತಾನ: ಫೇಸ್‌ಬುಕ್‌ನಲ್ಲಿ ಧರ್ಮನಿಂದನೆಯ ಬರಹ ಪ್ರಕಟಿಸಿದ್ದ ಷಿಯಾ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ  ಭಯೋತ್ಪಾದನಾ  ನಿಗ್ರಹ ನ್ಯಾಯಾಲಯ  ಮರಣದಂಡನೆ ನೀಡಿದೆ. ತೈಮೂರ್ ರಜಾ (30) ಶಿಕ್ಷೆಗೊಳಗಾದವರು.ಪಂಜಾಬ್ ಪ್ರಾಂತ್ಯದ ಬಹವಲ್‌ ಪುರ್‌ ಜಿಲ್ಲೆಯ ಭಯೋತ್ಪಾದನಾ  ನಿಗ್ರಹ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 

ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ ಇದೇ ಮೊದಲಬಾರಿಗೆ ಗಲ್ಲುಶಿಕ್ಷೆ ನೀಡಲಾಗಿದೆ. ಆದರೆ ಧರ್ಮನಿಂದನೆಗೆ ಯಾರನ್ನೂ ಗಲ್ಲಿಗೇರಿಸಿಲ್ಲ.ಸೈಬರ್‌ ಅಪರಾಧಗಳಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಕಳೆದ ವರ್ಷ ಪಾಕಿಸ್ತಾನ  ಜಾರಿಗೆ ತಂದಿದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry