ಮಣಿಕಟ್ಟು ಕತ್ತರಿಸಿಕೊಳ್ಳಲು ಯತ್ನಿಸಿದ್ದ ರಾಜಕುಮಾರಿ ಡಯಾನಾ !

7

ಮಣಿಕಟ್ಟು ಕತ್ತರಿಸಿಕೊಳ್ಳಲು ಯತ್ನಿಸಿದ್ದ ರಾಜಕುಮಾರಿ ಡಯಾನಾ !

Published:
Updated:
ಮಣಿಕಟ್ಟು ಕತ್ತರಿಸಿಕೊಳ್ಳಲು ಯತ್ನಿಸಿದ್ದ ರಾಜಕುಮಾರಿ ಡಯಾನಾ !

ಲಂಡನ್‌: ಜಗತ್ತಿನ ಕಣ್ಮನ ಸೆಳೆದಿದ್ದ ರಾಜಕುಮಾರಿ ಡಯಾನಾ ತನ್ನ ಮಣಿಕಟ್ಟನ್ನು ಕತ್ತರಿಸಿಕೊಳ್ಳಲು ಪ್ರಯತ್ನಿಸಿದ್ದರು! ಮದುವೆಯ ನಂತರ ಇವರು ಖಿನ್ನತೆಗೊಳಗಾಗಿದ್ದರು.ಡಯಾನಾ ಬದುಕಿನ ಕುರಿತ ರಹಸ್ಯ ವಿಡಿಯೊ ದೃಶ್ಯಾವಳಿ ಆಧರಿಸಿ  ಆ್ಯಂಡ್ರಿವ್‌ ಮೊರ್ಟೊನ್‌  ಎಂಬುವರು ಬರೆದ ‘ಡಯಾನಾ–ಹರ್‌ ಟ್ರು ಸ್ಟೋರಿ’ ಎಂಬ ಪುಸ್ತಕದಲ್ಲಿ ಈ ಮಾಹಿತಿ ದಾಖಲಾಗಿದೆ.1991ರಲ್ಲಿ ಈ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. 20 ವರ್ಷಗಳವರೆಗೂ ಈ ವಿಡಿಯೊ ತುಣುಕುಗಳು ರಹಸ್ಯವಾಗಿದ್ದವು ಎಂದು ‘ದಿ ಸನ್‌’ ಪತ್ರಿಕೆ ವರದಿ ಮಾಡಿದೆ.ಖಿನ್ನತೆಯೊಂದಿಗೆ ಡಯಾನಾ ನಡೆಸಿದ ಹೋರಾಟ, ಪತಿ ಚಾರ್ಲ್ಸ್‌ ಮತ್ತು  ಕ್ಯಾಮಿಲ್ಲಾ ಜೊತೆಗಿನ ಆಕೆಯ ಬದುಕಿನ ಘಟನೆಗಳನ್ನು ಪುಸ್ತಕ ಒಳಗೊಂಡಿದೆ.‘ಆಗ ನಾನು ತುಂಬ ತೆಳ್ಳಗಾಗಿದ್ದೆ. ನನ್ನ ಕೃಶ ದೇಹ ನೋಡಿದ ಜನರು, ನಿಮ್ಮ ಮೂಳೆಗಳು ಕಾಣಿಸುತ್ತಿವೆ ಎಂದು ಹೇಳುತ್ತಿದ್ದರು’ ಎಂದು ಡಯಾನ ಹೇಳಿದ್ದಾರೆ.ವಿಶ್ವದಾದ್ಯಂತ ಸಾಕಷ್ಟು ಸುದ್ದಿಯಾಗಿದ್ದ ಚಾರ್ಲ್ಸ್‌– ಡಯಾನಾ ಅವರ ಮದುವೆ 1996 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. 1997ರಲ್ಲಿ  ಅಪಘಾತದಲ್ಲಿ ಡಯಾನಾ ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry